November 10, 2026
Tuesday, November 10, 2026
spot_img

ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಲಗೇಜ್‌ ಶುಲ್ಕ ಹೆಚ್ಚಳ : ಇಂದಿನಿಂದಲೇ ನೂತನ ದರ ಜಾರಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಬಸ್‌ ಪ್ರಯಾಣದ ಟಿಕೆಟ್‌ ದರ ಏರಿಕೆ ಬೆನ್ನಲ್ಲೇ ಇದೀಗ ಬಸ್‌ಗಳಲ್ಲಿ ಇಡುವ ಲಗೇಜ್‌ ದರವೂ ಹೆಚ್ಚಳವಾಗಿದೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ಬಸ್‌ಗಳಲ್ಲಿ ಸಾಗಿಸುವ ಲಗೇಜ್ ಶುಲ್ಕವನ್ನು ಅಧಿಕೃತವಾಗಿ ಪರಿಷ್ಕರಿಸಿದ್ದು, ಇಂದಿನಿಂದಲೇ ಹೊಸ ದರಗಳು ಜಾರಿಗೆ ಬಂದಿವೆ.

ಬಸ್‌ ಟಿಕೆಟ್‌ ದರ ಏರಿಕೆ ಬೆನ್ನಲ್ಲೇ ಲಗೇಜ್‌ ಸಾಗಣೆ ದರ ದುಪ್ಪಟ್ಟಾಗಿದೆ. ಈ ಹೊಸ ಪರಿಷ್ಕೃತ ದರಗಳು ಈಗಾಗಲೇ ರಾಜ್ಯಾದ್ಯಂತ ಜಾರಿಗೆ ಬಂದಿದ್ದು, ದೂರದೂರುಗಳಿಗೆ ಪ್ರಯಾಣಿಸುವಾಗ ಬ್ಯಾಗ್ ಅಥವಾ ಹೆಚ್ಚಿನ ಸಾಮಗ್ರಿಗಳನ್ನು ಕೊಂಡೊಯ್ಯುವ ಪ್ರಯಾಣಿಕರ ಜೇಬಿಗೆ ಇದು ದೊಡ್ಡ ಕತ್ತರಿ ಬೀಳಲಿದೆ. ಸಣ್ಣ ಪುಟ್ಟ ವ್ಯಾಪಾರಿಗಳು ಹಾಗೂ ನಿತ್ಯ ಪ್ರಯಾಣಿಕರು ಈ ದರ ಏರಿಕೆಯಿಂದ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಮೊದಲ 5 ಸ್ಟೇಜ್‌ಗಳಿಗೆ ಹಳೆಯ ದರ 6 ರೂಪಾಯಿ ಇದ್ದು, ಅದನ್ನು ಈಗ 10 ರೂಪಾಯಿಗೆ ಹೆಚ್ಚಿಸಲಾಗಿದೆ. 6 ರಿಂದ 10 ಸ್ಟೇಜ್‌ವರೆಗಿನ ಪ್ರಯಾಣಕ್ಕೆ ಹಳೆ ದರ 10 ರೂಪಾಯಿ ಇದ್ದು, ಇದನ್ನು 15 ರೂಪಾಯಿಗೆ ಏರಿಸಲಾಗಿದೆ. 11 ರಿಂದ 15 ಸ್ಟೇಜ್‌ಗಳವರೆಗೆ ಹಳೆ ದರ 20 ರೂಪಾಯಿ ಇದ್ದು, ಈಗ ಅದನ್ನು 25 ರೂಪಾಯಿಗೆ ಪರಿಷ್ಕರಿಸಲಾಗಿದೆ. ಹೀಗಾಗಿ ಬಸ್‌ನಲ್ಲಿ ಪ್ರಯಾಣಿಸುವವರು ಕೂಡ ಮನೆಯಿಂದ ಎಷ್ಟು ಲಗೇಜ್‌ ಪ್ಯಾಕ್‌ ಮಾಡಬೇಕು ಎಂದು ಆಲೋಚಿಸುವುದು ಉತ್ತಮವಾಗಿದೆ.

Must Read