ಮೇಷ
ಪ್ರಗತಿಯ ದಿನ. ಗುರಿ ಸಾಧನೆ. ಅಡ್ಡಿಗಳನ್ನು ದಾಟಲು ಸಮರ್ಥ. ಮೇಲಧಿಕಾರಿ ಪ್ರಶಂಸೆ. ಪ್ರೀತಿಯಲ್ಲಿ ಮಾತ್ರ ಅಸಂತೃಪ್ತಿ ಕಾಡಲಿದೆ.
ವೃಷಭ
ಎಲ್ಲ ವಿಚಾರದಲ್ಲಿ ಇಂದು ಸಹನೆ ಮುಖ್ಯ. ಉತ್ಸಾಹ ಕುಂದಿಸುವ ಪ್ರಸಂಗ ಉಂಟಾದೀತು. ಸರಿಯಾಗಿ ಯೋಚಿಸಿಯೇ ಪ್ರಮುಖ ನಿರ್ಧಾರ ತಾಳಿ.
ಮಿಥುನ
ಹೆಚ್ಚಿನ ಒತ್ತಡ ಎದುರಿಸುವಿರಿ. ಸಹೋದ್ಯೋಗಿ ಜತೆ ಸಮಸ್ಯೆ ಉಂಟಾದೀತು. ಮಹತ್ವದ ವಹಿವಾಟು ಇಂದು ನಡೆಸದಿರಿ.
ಕಟಕ
ವಹಿವಾಟು ಸುಗಮ. ಕೌಟುಂಬಿಕ ನಿರಾಳತೆ. ವಾಹನ ಖರೀದಿಯ ಆಸೆ ಪೂರೈಸುವ ಸಾಧ್ಯತೆ. ಆರ್ಥಿಕ ನಿರ್ವಹಣೆ ಉತ್ತಮಗೊಳ್ಳುವುದು.
ಸಿಂಹ
ಸಂಗಾತಿ ಜತೆ ಕಲಹ ಆಗದಂತೆ ಎಚ್ಚರ ವಹಿಸಿ. ಸಂಬಂಧದಲ್ಲಿ ಪ್ರಾಮಾಣಿಕತೆ ಮುಖ್ಯ. ಖರ್ಚು ನಿಯಂತ್ರಣಕ್ಕೆ ದಾರಿ ಹುಡುಕಿ.
ಕನ್ಯಾ
ವಿಶ್ವಾಸದ ಕೊರತೆ ನಿಮ್ಮ ಪ್ರಗತಿಗೆ ಅಡ್ಡಿ ತಂದೀತು. ಪ್ರೀತಿಯ ವಿಚಾರದಲ್ಲಿ ಅಸಂತೃಪ್ತಿ. ಕೆಲವರ ಜತೆ ಬಿರುಸಿನ ವಾಗ್ವಾದ ನಡೆದೀತು.
ತುಲಾ
ಕೆಲದಿನಗಳ ಒತ್ತಡ ಕಳೆದ ನಿರಾಳ ಭಾವ. ಆಪ್ತರ ಜತೆ ಸೌಹಾರ್ದ ಸಂಬಂಧ. ಉದ್ದಿಮೆಯಲ್ಲಿ ಯಶಸ್ಸು. ಆರೋಗ್ಯ ತೃಪ್ತ್ತಿಕರ.
ವೃಶ್ಚಿಕ
ಖಾಸಗಿ ಬದುಕಿಗೆ ಸಂಬಂಧಿಸಿ ಮಹತ್ವದ ನಿರ್ಧಾರ ತಾಳಲು ಸಕಾಲ. ನಿಮಗೆ ಒಳಿತಾಗಲಿದೆ. ಮನೆ ಖರೀದಿಯ ಉದ್ದೇಶ ಬೇಗ ಸಫಲ.
ಧನು
ಖಾಸಗಿ ಮತ್ತು ವೃತ್ತಿ ಬದುಕಿನ ಮಧ್ಯೆ ಸಮತೋಲನ ಸಾಽಸಿ. ಯಾವುದೇ ಒಂದನ್ನು ಕಡೆಗಣಿಸಬೇಡಿ. ವಿಶ್ವಾಸ ಹೆಚ್ಚಿಸುವ ಬೆಳವಣಿಗೆ.
ಮಕರ
ವೃತ್ತಿಯಲ್ಲಿ ಯಶಸ್ಸು.ಇತರರ ಜತೆ ಸಹಕಾರ ವೃದ್ಧಿ. ಇದು ನಿಮ್ಮ ಏಳಿಗೆಗೆ ಕಾರಣವಾಗಲಿದೆ. ಹಣದ ವಿಚಾರದಲ್ಲಿ ನಿಮಗೆ ಅನುಕೂಲಕರ ಸನ್ನಿವೇಶ.
ಕುಂಭ
ಫ ಲಪ್ರದ ದಿನ. ಆರ್ಥಿಕ ಉನ್ನತಿ. ಏಕಾಂಗಿಗಳಿಗೆ ವಿವಾಹ ಸಂಬಂಧ ಕೂಡಿಬಂದೀತು. ಆರೋಗ್ಯ ಸಮಸ್ಯೆ ಪರಿಹಾರ.
ಮೀನ
ಆರೋಗ್ಯದ ಕುರಿತಂತೆ ಗಮನ ಕೊಡಿ. ನಿರ್ಲಕ್ಷಿಸಬೇಡಿ. ಹಣ ಗಳಿಕೆ ಹೆಚ್ಚಳ. ಮನೆಯಲ್ಲಿ ವಾಗ್ವಾದಕ್ಕೆ ಆಸ್ಪದ ಕೊಡಬೇಡಿ.



