ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರು ನಗರದಲ್ಲಿ ಬೈಕ್ ಟ್ಯಾಕ್ಸಿ ಸವಾರನೊಬ್ಬ ಯುವತಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ. ಸ್ವತಃ ಯುವತಿಯೇ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಒಂದನ್ನು ಅಪ್ಲೋಡ್ ಮಾಡಿದ್ದು, ಮಹಿಳೆಯರ ಸೇಫ್ಟಿ ಬಗ್ಗೆ ಪ್ರಶ್ನೆ ಮೂಡುವಂತಾಗಿದೆ.
ಯಲಹಂಕದ ಜ್ಯುಡಿಷಿಯಲ್ ಲೇಔಟ್ನಿಂದ ಯುವತಿ ಬೈಕ್ ಟ್ಯಾಕ್ಸಿ ಬುಕ್ ಮಾಡಿದ್ದಾರೆ. ಸವಾರ ಲೊಕೇಷನ್ಗೆ ಬಂದು ಕಾಲ್ ಮಾಡದೇ ಮೆಸೇಜ್ ಕೂಡ ಮಾಡದೇ ವಾಪಾಸಾಗಿದ್ದಾನೆ. ತದನಂತರ ಯುವತಿ ಕರೆ ಮಾಡಿ ಬಂದು ವಾಪಾಸ್ ಹೋಗಿದ್ದು ಯಾಕೆ ಎಂದು ಪ್ರಶ್ನೆ ಮಾಡಿದ್ದಾಳೆ.
ಈ ವೇಳೆ ಆತ ಸೆಕ್ಸ್ ಅವೈಲೇಬಲ್ ಇದೆಯಾ? ರೇಟ್ ಎಷ್ಟಿದೆ ಎಂದು ಪ್ರಶ್ನಿಸಿದ್ದಾನೆ. ಯುವತಿ ಕಾಲ್ ಕಟ್ ಮಾಡಿ ಬ್ಲಾಕ್ ಮಾಡಿದ್ದಾಳೆ. ಒಬ್ಬ ಡ್ರೈವರ್ನಿಂದಾಗಿ ಎಲ್ಲರಿಗೂ ಕೆಟ್ಟ ಹೆಸರು ಬರುತ್ತದೆ. ಈಗಿನ ಕಾಲದಲ್ಲೂ ಮಹಿಳೆಯರಿಗೆ ಸೇಫ್ಟಿ ಇಲ್ಲ ಎಂದಾದರೆ ನಾವು ಏನು ಮಾಡೋದು? ಹೆಣ್ಮಕ್ಕಳೇ ಆದಷ್ಟು ಬೈಕ್ ಟ್ಯಾಕ್ಸಿಯನ್ನು ಅವಾಯ್ಡ್ ಮಾಡಿ. ಈತ ಕರೆ ಮಾಡಿ ಕೇಳಿದ, ಇನ್ಯಾರೋ ಗೊತ್ತಿಲ್ಲದ ಜಾಗಕ್ಕೆ ಕರೆದುಕೊಂಡು ಹೋಗಬಹುದು. ನಿಮ್ಮ ಸೇಫ್ಟಿ ನೀವು ನೋಡಿಕೊಳ್ಳಿ ಎಂದಿದ್ದಾರೆ.



