ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂದು ಬೆಂಗಳೂರಿಗೆ ಪ್ರಧಾನಿ ನರೇಂದ್ರ ಮೋದಿ ಆಗಮಿಸಲಿದ್ದು, ಬಹುನಿರೀಕ್ಷಿತ ಗುಲಾಬಿ ಮೆಟ್ರೋ ಉದ್ಘಾಟನೆಯಾಗಲಿದೆ. ಪಿಂಕ್ ಮೆಟ್ರೋ ಲೋಕಾರ್ಪಣೆ ಹಾಗೂ ಇನ್ನಿತರ ಕಾರ್ಯಕ್ರಮಗಳಿಗಾಗಿ ಪ್ರಧಾನಿ ಕರ್ನಾಟಕಕ್ಕೆ ಆಗಮಿಸಲಿದ್ದಾರೆ.
ತಾವರೆಕೆರೆ ಮೆಟ್ರೋ ನಿಲ್ದಾಣದಿಂದ ಕಾಳೇನ ಅಗ್ರಹಾರದವರೆಗಿನ ಪಿಂಕ್ ಲೈನ್ ಮಾರ್ಗವನ್ನು ಪ್ರಧಾನಿ ಉದ್ಘಾಟಿಸಲಿದ್ದಾರೆ. ಪಿಂಕ್ ಲೈನ್ ಮಾರ್ಗವು 7.5 ಕಿಮೀ ಉದ್ದವಿದ್ದು, ಆರು ನಿಲ್ದಾಣಗಳನ್ನು ಒಳಗೊಂಡಿದೆ. ಕಾಳೇನ ಅಗ್ರಹಾರ, ಹುಳಿಮಾವು, ಬಿಳೇಕಲ್ಲಹಳ್ಳಿ ಐಐಎಂಬಿ, ಎನ್.ಎಸ್ ಪಾಳ್ಯ, ಜೆಪಿ ನಗರ ನಾಲ್ಕನೇ ಹಂತ, ಜಯನಗರ ಹಾಗೂ ಎಸ್.ಜಿ. ಪಾಳ್ಯ ಮೆಟ್ರೋ ನಿಲ್ದಾಣ ಇರಲಿದೆ.
ಬೆಳಗ್ಗೆ ಏಳು ಗಂಟೆ ಸುಮಾರಿಗೆ ಪ್ರಧಾನಿ ಮೋದಿ ದೆಹಲಿಯಿಂದ ಹೊರಟಿದ್ದು, ಹತ್ತು ಗಂಟೆ ಸುಮಾರಿಗೆ ಎಚ್ಎಎಲ್ಗೆ ಆಗಮಿಸಲಿದ್ದಾರೆ. ತದನಂತರ ಜಿಗಣಿ ಬಳಿಯ ಪ್ರಶಾಂತಿ ಕುಟೀರಂ ಸುವರ್ಣ ಮಹೋತ್ಸವದಲ್ಲಿ ಭಾಗಿಯಾಗಲಿದ್ದಾರೆ. ತದನಂತರ ಮಧ್ಯಾಹ್ನ12.40ಕ್ಕೆ ಎಸ್ಜಿ ಪಾಳ್ಯ ಮೆಟ್ರೋ ನಿಲ್ದಾಣಕ್ಕೆ ಆಗಮಿಸಿ, 12.45ಕ್ಕೆ ಮೆಟ್ರೋ ಉದ್ಘಾಟನೆ ಮಾಡಲಿದ್ದಾರೆ. ತದನಂತರ 1.05ರವರೆಗೆ ಮೆಟ್ರೋದಲ್ಲಿ ಸಂಚಾರ ಮಾಡಲಿದ್ದಾರೆ.
ಪ್ರಧಾನಿ ಮೋದಿ ರಾಜ್ಯಕ್ಕೆ ಭೇಟಿ ನೀಡುತ್ತಿರುವ ಹಿನ್ನೆಲೆ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಹತ್ತು ದಿನಗಳಿಂದಲೇ ಎಸ್ಪಿಜಿ ಟೀಂ ಬೆಂಗಳೂರಿಗೆ ಆಗಮಿಸಿ ಪರಿಶೀಲನೆ ನಡೆಸಿದೆ. ಪ್ರಧಾನಿ ಮೋದಿ ಚಲಿಸುವ ರಸ್ತೆ, ಮೆಟ್ರೋ ನಿಲ್ದಾಣ ಎಲ್ಲ ಕಡೆ ಬಿಗಿ ಭದ್ರತೆ ನೀಡಲಾಗಿದೆ. ಧಾನಿ ಮೋದಿ ಕಾರ್ಯಕ್ರಮದ 1 ಕಿಮೀ ವ್ಯಾಪ್ತಿಯಲ್ಲಿ ನೋ ಫ್ಲೈ ಝೋನ್ ಘೋಷಣೆ ಮಾಡಲಾಗಿದ್ದು, ಬೆಂಗಳೂರು ನಗರ ಪೊಲೀಸ್ ಆಯುಕ್ತ ಸಿಮಂತ್ ಕುಮಾರ್ ಸಿಂಗ್ ನೇತೃತ್ವದಲ್ಲಿ ಭದ್ರತೆ ನಿಯೋಜಿಸಲಾಗಿದೆ.



