November 13, 2026
Friday, November 13, 2026
spot_img

ದಿನಭವಿಷ್ಯ: ವ್ಯವಹಾರಗಳಲ್ಲಿ ಹಣ ಹೂಡಿಕೆ ಮಾಡಲು ಸೂಕ್ತ ಸಮಯವಲ್ಲ, ಸಂಬಂಧಗಳಲ್ಲಿ ಎಚ್ಚರ ವಹಿಸಿ

ಮೇಷ
ವೃತ್ತಿಯಲ್ಲಿ ತೊಡಕು, ಅಸಂತೃಪ್ತಿ ಉಂಟಾದೀತು. ಆದರೆ ಅದು ಕ್ಷಣಿಕ. ಬಳಿಕ ಸರಿಹೋಗಲಿದೆ. ಆರೋಗ್ಯದ ಚಿಂತೆ ಪರಿಹಾರ, ನಿರಾಳತೆ.
ವೃಷಭ
ಸಂಬಂಧದಲ್ಲಿ ಒಡಕು ಮೂಡದಂತೆ ಎಚ್ಚರ ವಹಿಸಿರಿ. ಏಕಾಂಗಿಗಳಿಗೆ ವೈವಾಹಿಕ ಬಂಧ ಕೂಡಿಬಂದೀತು. ಆರ್ಥಿಕ ಪರಿಸ್ಥಿತಿ ಉತ್ತಮ.
ಮಿಥುನ
ವೃತ್ತಿಯಲ್ಲಿ ಸವಾಲು. ತಪ್ಪು ಘಟಿಸದಂತೆ ಎಚ್ಚರ ವಹಿಸಿ. ಹೊಸ ವ್ಯವಹಾರ ದಲ್ಲಿ ಹಣ ಹೂಡುವುದು ಸಮಂಜಸವೆನಿಸದು. ಕೌಟುಂಬಿಕ ಅಸಹಕಾರ.
ಕಟಕ
ಎಲ್ಲ ವಿಧಗಳಲ್ಲೂ ಇಂದು ತೃಪ್ತಿಕರ ದಿನ. ಧನಪ್ರಾಪ್ತಿ. ಕಾರ್ಯ ಸಫಲ. ನಿಮ್ಮ ಇಷ್ಟವೊಂದು ನೆರವೇರುವುದು. ಬಂಧು ಜತೆಗಿನ ವಿರಸ ಶಮನ.
ಸಿಂಹ
ಏರಿಳಿತಗಳ ದಿನ. ದೊಡ್ಡ ಹೊಣೆ ಬೀಳಲಿದೆ.ಅದನ್ನು ಪೂರೈಸಲು ಕಷ್ಟ ಪಡುವಿರಿ. ಕಳಕೊಂಡ ಪ್ರೀತಿ ಪಡೆಯಲು ಪ್ರಾಮಾಣಿಕ ಪ್ರಯತ್ನ ನಡೆಸಿರಿ.
ಕನ್ಯಾ
ಸವಾಲಿನ ದಿನ. ಹಣದ ವ್ಯವಹಾರದಲ್ಲಿ ತೊಡಕು ಕಾಣಿಸೀತು. ಹದ ತಪ್ಪಿದ ಮಾತು ಉದ್ವಿಗ್ನತೆ ಉಂಟು ಮಾಡಬಹುದು. ಸಂಯಮ ವಹಿಸಿರಿ.
ತುಲಾ
ವೃತ್ತಿಕ್ಷೇತ್ರದಲ್ಲಿ ಉಂಟಾಗಿದ್ದ ಉದ್ವಿಗ್ನತೆ ನಿವಾರಣೆ. ಸೌಹಾರ್ದ ಪರಿಸ್ಥಿತಿ ನೆಲೆಸಲಿದೆ. ಧನಹಾನಿ ಸಂಭವ, ಎಚ್ಚರದಿಂದ ವ್ಯವಹರಿಸಿ.
ವೃಶ್ಚಿಕ
ದೈನಂದಿನ ಒತ್ತಡದಿಂದ ಮುಕ್ತಿ. ನಿಮ್ಮ ಇಷ್ಟದ ಹವ್ಯಾಸದಲ್ಲಿ ಕಾಲ ಕಳೆಯುವ ಅವಕಾಶ. ಒಟ್ಟಿನಲ್ಲಿ ಇಂದು ಸಂತೋಷದ ಮನಸ್ಥಿತಿ
ಧನು
ಅದೃಷ್ಟ ನಿಮಗೆ ಕೈಕೊಡಬಹುದು. ಹಾಗಾಗಿ ಕಾರ್ಯದಲ್ಲಿ ಸಫಲತೆ ದೊರಕದು. ಪ್ರೀತಿಯ ವಿಷಯದಲ್ಲಿ ಭಾವನಾತ್ಮಕ ಏರುಪೇರು.
ಮಕರ
ಭಾವುಕ ಪ್ರಸಂಗಕ್ಕೆ ಸಾಕ್ಷಿಯಾಗುವಿರಿ. ಮನೋನಿಯಂತ್ರಣ ಸಾಧಿಸಿ. ವೃತ್ತಿಯಲ್ಲಿ ಆಂಶಿಕ ಯಶಸ್ಸು ಪಡೆಯುವಿರಿ.
ಕುಂಭ
ಬಹಳಷ್ಟು ಕೆಲಸ ಬಾಕಿಯಿದೆ. ಅದನ್ನು ಪೂರೈಸಬೇಕಾದ ಒತ್ತಡ. ವಹಿವಾಟಿಗೆ ಕೆಲವು ಅಡ್ಡಿ ಉಂಟಾದೀತು. ವಿವೇಕದ ನಡೆ ಅಗತ್ಯ.
ಮೀನ
ವೃತ್ತಿಯಲ್ಲೂ, ಖಾಸಗಿ ಬದುಕಲ್ಲೂ ಕೆಲ ಸಮಸ್ಯೆ ಎದುರಿಸುವಿರಿ. ಅಭದ್ರತೆಯ ಭಾವ ಕಾಡಲಿದೆ. ಸಂಗಾತಿ ಜತೆಗೆ ಮನಸ್ತಾಪ ಸಂಭವ.

Must Read

Skip to toolbar