November 13, 2026
Friday, November 13, 2026
spot_img

ಭಕ್ತರೇ, ನೀವು ಕಮೆಂಟ್‌ ಮಾಡಿದಷ್ಟು ಪುಸ್ತಕ ಹಿಟ್‌ ಆಗುತ್ತದೆ: ರಾಹುಲ್‌ ಗಾಂಧಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಭಕ್ತರೇ, ನೀವೆಷ್ಟು ಕಮೆಂಟ್‌ ಮಾಡುತ್ತೀರ ಅಷ್ಟು ಪುಸ್ತಕ ಹಿಟ್‌ ಆಗುತ್ತದೆ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ವ್ಯಂಗ್ಯ ಮಾಡಿದ್ದಾರೆ. ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಆತ್ಮಚರಿತ್ರೆ ಬಗ್ಗೆ ಬಿಜೆಪಿ ನಾಯಕರು ಟೀಕೆ ಮಾಡಿದ್ದು, ಅವರಿಗೆ ರಾಗಾ ತಿರುಗೇಟು ನೀಡಿದ್ದಾರೆ.

ಬಿಜೆಪಿ ನಾಯಕರಿಗೆ ನಮ್ಮ ತಾಯಿಯವರ ಗುಣಗಳು, ವ್ಯಕ್ತಿತ್ವ ತುಂಬಾನೇ ಇಷ್ಟ. ಅವರು ನಮ್ಮ ತಾಯಿಯನ್ನು ಅದ್ಭುತ ವ್ಯಕ್ತಿ ಎಂದು ಭಾವಿಸುತ್ತಾರೆ. ಆದರೆ ಇದನ್ನು ಬಹಿರಂಗವಾಗಿ ಹೇಳಲು ಸಾಧ್ಯವಾಗುತ್ತಿಲ್ಲ ಎಂದಿದ್ದಾರೆ. ಇನ್ಸ್ಟಾಗ್ರಾಮ್‌ನಲ್ಲಿ ಪ್ರಶ್ನೋತ್ತರದ ವೇಳೆ ಬಿಲಾಂಗಿಂಗ್‌: ಎ ಜರ್ನಿ ಆಫ್‌ ಲವ್‌ ಪುಸ್ತಕದ ಬಗ್ಗೆ ಬಿಜೆಪಿ ಯಾಕಿಷ್ಟು ಟೀಕೆ ಮಾಡುತ್ತಿದೆ ಎಂದು ಪ್ರಶ್ನಿಸಲಾಗಿದೆ. ಇದಕ್ಕೆ ಸೋನಿಯಾ ಗಾಂಧಿ, ಇದು ಒಳ್ಳೆಯ ಪುಸ್ತಕ ಅದಕ್ಕೆ ಅಷ್ಟೊಂದು ಪ್ರತಿಕ್ರಿಯೆಗಳು ಬರುತ್ತಿವೆ. ಎಲ್ಲರೂ ಇದನ್ನು ಓದುತ್ತಿದ್ದಾರೆ. ಓದದೇ ಇರುವುದು ಅಸಾಧ್ಯ. ಓದಿದಮೇಲೆ ಏನಾದರೂ ಪ್ರತಿಕ್ರಿಯೆ ನೀಡಬೇಕಲ್ಲ ಎಂದಿದ್ದಾರೆ.

ಅವರಲ್ಲಿ ಅನೇಕರು ವಾಸ್ತವವಾಗಿ ಸೋನಿಯಾ ಅವರನ್ನು ಗುಪ್ತವಾಗಿ ಇಷ್ಟಪಡುತ್ತಾರೆ ಮತ್ತು ಅವರು ಅದ್ಭುತ ಎಂದು ಭಾವಿಸುತ್ತಾರೆ. ಆದರೆ ದುರದೃಷ್ಟವಶಾತ್ ಅವರಿಗೆ ಅದನ್ನು ಹೇಳಲು ಸಾಧ್ಯವಾಗುತ್ತಿಲ್ಲ. ಇನ್ನೊಂದು ವಿಷಯವೆಂದರೆ – ‘ಭಕ್ತರೇ’, ದಯವಿಟ್ಟು ಆ ಪುಸ್ತಕದ ಬಗ್ಗೆ ಕಾಮೆಂಟ್ ಮಾಡುವುದನ್ನು ಮುಂದುವರಿಸಿ; ಏಕೆಂದರೆ ನೀವು ಎಷ್ಟು ಹೆಚ್ಚು ಕಾಮೆಂಟ್ ಮಾಡುತ್ತೀರೋ, ಅಷ್ಟು ಉತ್ತಮವಾಗಿ ಆ ಪುಸ್ತಕವು ಜನಪ್ರಿಯವಾಗುತ್ತದೆ. ಸರಿನಾ ಗೆಳೆಯರೇ ಎಂದು ರಾಗಾ ಹೇಳಿದ್ದಾರೆ.

Must Read