November 14, 2026
Saturday, November 14, 2026
spot_img

ದಿನಭವಿಷ್ಯ: ಕಠಿಣ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಗಲಿದೆ, ಆರೋಗ್ಯದ ಕಡೆ ಇರಲಿ ಸ್ವಲ್ಪ ಗಮನ

ಮೇಷ
ಆರಂಭಿಕ ಅಡೆತಡೆ ಎದುರಿಸಿದರೂ ಬಳಿಕ ಎಲ್ಲ ಸುಗಮ. ವೃತ್ತಿಯಲ್ಲಿ ಸಹಕಾರ. ಕೌಟುಂಬಿಕ ಸಮಾಧಾನ. ಶಾಪಿಂಗ್ ನಡೆಸುವ ಉತ್ಸಾಹ.
ವೃಷಭ
ಉತ್ಸಾಹದ ದಿನ. ವೃತ್ತಿಯಲ್ಲಿ ಕಠಿಣ ದುಡಿಮೆಗೆ ಸೂಕ್ತ ಫಲ. ಕುಟುಂಬಸ್ಥರ ಜತೆ ಅನವಶ್ಯ ವಾಗ್ವಾದ ನಡೆಸದಿರಿ.
ಮಿಥುನ
ಲಾಭ- ವೆಚ್ಚ ಎರಡನ್ನೂ ಕಾಣುವಿರಿ. ಕೆಲವು ಬದಲಾವಣೆ ಸಂಭವಿಸಬಹುದು. ಕಾರ್ಯ ವಿಳಂಬ. ಆರೋಗ್ಯ ಕಾಳಜಿಯಿರಲಿ.
ಕಟಕ
ಎಲ್ಲ ರಂಗದಲ್ಲಿ ಯಶಸ್ಸು. ನಿಮ್ಮ ಕಾರ್ಯಶೈಲಿ ಅದಕ್ಕೆ ನೆರವಾಗಲಿದೆ. ಶೇರು ವ್ಯವಹಾರ ಲಾಭ ತರಲಿದೆ. ಆಸ್ತಿ ಖರೀದಿಯ ಸಾಧ್ಯತೆ.
ಸಿಂಹ
ಹೆಚ್ಚಿನ ಕೆಲಸದ ಒತ್ತಡ ನಿಮ್ಮ ದಿನ ನಿಧಾನಗೊಳಿಸಬಹುದು. ಮಾತಿನ ಚಕಮಕಿ. ಹಣದ ಹರಿವು ಸಾಧಾರಣ. ತಲೆನೋವು ಸಾಧ್ಯತೆ
ಕನ್ಯಾ
ನಿಮ್ಮ ಪರವಾದ ಬೆಳವಣಿಗೆ ನಡೆದೀತು. ಕೆಲಸದಲ್ಲಿ ತೃಪ್ತಿ. ಆರ್ಥಿಕ ಸ್ಥಿತಿ ಸುಧಾರಣೆ. ಆಹಾರ ಸೇವನೆ ಹೊಟ್ಟೆ ಕೆಡಿಸದಂತೆ ಜಾಗ್ರತೆ ವಹಿಸಿ.
ತುಲಾ
ಗೆಳೆಯರು ಅಥವಾ ಕುಟುಂಬಸ್ಥರು ಅಚ್ಚರಿ ಸೃಷ್ಟಿಸಿಯಾರು. ನಿಮ್ಮ ಕಾರ್ಯವೈಖರಿಗೆ ಶ್ಲಾಘನೆ. ಹಳೆ ಹೂಡಿಕೆಯ ಲಾಭ ಸಿಗಲಿದೆ. ಧನಪ್ರಾಪ್ತಿ.
ವೃಶ್ಚಿಕ
ಇಂದು ಹೆಚ್ಚು ಸಹನೆಯಿಂದ ವರ್ತಿಸಿ. ಏಕಕಾಲದಲ್ಲಿ ಹಲವಾರು ಬೆಳವಣಿಗೆ ಉಂಟಾದೀತು. ಕ್ರೀಡಾಸ್ಪೂರ್ತಿ ಪ್ರದರ್ಶಿಸಿ. ಭಿನ್ನಾಭಿಪ್ರಾಯ ಸಾಧ್ಯತೆ.
ಧನು
ವೃತ್ತಿ ಏಳಿಗೆ. ಆಪ್ತರ ಜತೆಗಿನ ಭಿನ್ನಮತ ನಿವಾರಣೆ. ಏಕಾಂಗಿಗಳಿಗೆ ವಿವಾಹ ಸಂಬಂಧ. ಆದಾಯದ ಖರ್ಚು ಸರಿತೂಗಿಸಿ.
ಮಕರ
ವಹಿವಾಟಿನಲ್ಲಿ ಅಡ್ಡಿ ಎದುರಾದೀತು. ನಡೆನುಡಿಯಲ್ಲಿ ಮುಕ್ತತೆ ಇರಲಿ. ಗೌಪ್ಯ ಬೇಡ. ಅನವಶ ಖರ್ಚು ಹೆಚ್ಚಲಿದೆ.
ಕುಂಭ
ಆರ್ಥಿಕವಾಗಿ ಸಮಾಧಾನಕರ ದಿನ. ವಹಿವಾಟು ಸುಗಮ. ಎಣ್ಣೆ ತಿಂಡಿ ಹೆಚ್ಚು ಸೇವಿಸದಿರಿ. ಕೌಟುಂಬಿಕ ಸಮಾಧಾನ. ಆಪ್ತ ಬಂಧು ಭೇಟಿ.
ಮೀನ
ಸಕಾಲದಲ್ಲಿ ನಿಮ್ಮ ಕಾರ್ಯ ಮುಗಿಸಿ. ನಾಳೆಗೆ ಮುಂದೂಡುವ ಸ್ವಭಾವ ಬಿಡಿ. ಆಪ್ತರ ಜತೆ ಸಂಬಂಧ ಕೆಡುವ ರೀತಿ ವರ್ತಿಸಬೇಡಿ.

Must Read