ಬೇಕಾಗುವ ಪದಾರ್ಥಗಳು:
ಆಲೂಗಡ್ಡೆ
ಬೆಣ್ಣೆ
ಈರುಳ್ಳಿ
ಬೆಳ್ಳುಳ್ಳಿ
ಮೈದಾ ಹಿಟ್ಟು
ಹಾಲು
ಚೀಸ್
ಉಪ್ಪು
ಕಾಳುಮೆಣಸಿನ ಪುಡಿ
ಮಾಡುವ ವಿಧಾನ
ಮೊದಲು ಬಾಣಲೆಯಲ್ಲಿ ಬೆಣ್ಣೆಯನ್ನು ಕರಗಿಸಿ, ಸಣ್ಣಗೆ ಹೆಚ್ಚಿದ ಈರುಳ್ಳಿ ಮತ್ತು ಬೆಳ್ಳುಳ್ಳಿಯನ್ನು ಹಸಿವಾಸನೆ ಹೋಗುವವರೆಗೆ ಚೆನ್ನಾಗಿ ಬಾಡಿಸಿ. ಇದಕ್ಕೆ ಮೈದಾ ಹಿಟ್ಟು ಹಾಕಿ ಕಡಿಮೆ ಉರಿಯಲ್ಲಿ 1-2 ನಿಮಿಷ ಹುರಿಯಿರಿ. ನಂತರ ಉರಿಯನ್ನು ಕಡಿಮೆ ಮಾಡಿ ನಿಧಾನವಾಗಿ ಹಾಲು ಸೇರಿಸುತ್ತಾ, ಗಂಟು ಬಾರದಂತೆ ಚೆನ್ನಾಗಿ ಕೈಯಾಡಿಸಿ. ಈಗ ಮುಂಚಿತವಾಗಿ ಬೇಯಿಸಿ ಇಟ್ಟುಕೊಂಡ ಆಲೂಗಡ್ಡೆ ತುಂಡುಗಳನ್ನು ಸೇರಿಸಿ ಸ್ಮಾಶ್ ಮಾಡಿ. ಹಾಲಿನೊಂದಿಗೆ ಅದು ಚೆನ್ನಾಗಿ ಬೆರೆತು ಕ್ರೀಮಿ ಸ್ಟ್ರಕ್ಚರ್ ಬರುವಂತೆ ಕುದಿಸಿ. ಸೂಪ್ ಹದವಾಗಿ ಕುದಿದ ನಂತರ ರುಚಿಗೆ ತಕ್ಕಷ್ಟು ಉಪ್ಪು ಮತ್ತು ಕಾಳುಮೆಣಸಿನ ಪುಡಿ ಹಾಕಿ. ಅಂತಿಮವಾಗಿ ತುರಿದ ಚೀಸ್ ಅನ್ನು ಹಾಕಿ, ಅದು ಸಂಪೂರ್ಣವಾಗಿ ಕರಗುವವರೆಗೆ 2 ನಿಮಿಷ ಕೈಯಾಡಿಸಿ ಸ್ಟವ್ ಆಫ್ ಮಾಡಿ. ಅಷ್ಟೇ, ಬಿಸಿಬಿಸಿಯಾದ, ಬಾಯಲ್ಲಿ ನೀರೂರಿಸುವ ಕ್ರೀಮಿ ಪೊಟ್ಯಾಟೋ ಚೀಸ್ ಸೂಪ್ ಸವಿಯಲು ಸಿದ್ಧ.



