November 13, 2026
Friday, November 13, 2026
spot_img

ಸೂಪರ್ ಹೆಲ್ದಿ ಸೋರೆಕಾಯಿ ಸೂಪ್.. ತೂಕ ಇಳಿಸೋಕೆ ಇದಕ್ಕಿಂತ ಬೆಸ್ಟ್ ಚಾಯ್ಸ್ ಬೇರೆ ಇಲ್ಲ

ಬೇಕಾಗುವ ಸಾಮಗ್ರಿಗಳು:

ಸೋರೆಕಾಯಿ

ಈರುಳ್ಳಿ

ಬೆಳ್ಳುಳ್ಳಿ

ಜೀರಿಗೆ ಪುಡಿ

ಕಾಳುಮೆಣಸು

ಎಣ್ಣೆ

ಉಪ್ಪು

ಕೊತ್ತಂಬರಿ ಸೊಪ್ಪು

ಮಾಡುವ ವಿಧಾನ

ಕುಕ್ಕರ್‌ನಲ್ಲಿ ಒಂದು ಚಮಚ ತುಪ್ಪ ಹಾಕಿ, ಹೆಚ್ಚಿದ ಈರುಳ್ಳಿ, ಬೆಳ್ಳುಳ್ಳಿ ಮತ್ತು ಸೋರೆಕಾಯಿ ತುಂಡುಗಳನ್ನು ಹಾಕಿ 2 ನಿಮಿಷ ಬಾಡಿಸಿ. ನಂತರ ಒಂದು ಗ್ಲಾಸ್ ನೀರು ಮತ್ತು ಸ್ವಲ್ಪ ಉಪ್ಪು ಸೇರಿಸಿ 2-3 ವಿಸಿಲ್ ಕೂಗಿಸಿ ಮೆದುವಾಗಿ ಬೇಯಿಸಿಕೊಳ್ಳಿ. ಬೇಯಿಸಿದ ಮಿಶ್ರಣ ತಣ್ಣಗಾದ ಮೇಲೆ ಮಿಕ್ಸಿ ಜಾರಿಗೆ ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ರುಬ್ಬಿದ ಮಿಶ್ರಣವನ್ನು ಒಂದು ಪಾತ್ರೆಗೆ ಸುರಿಯಿರಿ. ಅದಕ್ಕೆ ಜೀರಿಗೆ ಪುಡಿ, ಕಾಳುಮೆಣಸು ಪುಡಿ ಮತ್ತು ಅಗತ್ಯವಿದ್ದರೆ ಸ್ವಲ್ಪ ನೀರು ಸೇರಿಸಿ ಚೆನ್ನಾಗಿ ಕುದಿಸಿ. ಕೊನೆಯಲ್ಲಿ ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು ಉದುರಿಸಿ ಗ್ಯಾಸ್ ಆಫ್ ಮಾಡಿ. ಈಗ ಬಿಸಿ ಬಿಸಿಯಾದ, ಬಾಯಲ್ಲಿ ನೀರೂರಿಸುವ ಸೋರೆಕಾಯಿ ಸೂಪ್ ಸವಿಯಲು ಸಿದ್ಧ!

Must Read

Skip to toolbar