ಏನೇನ್ ಬೇಕು?
ಅನ್ನ
ಪುದೀನಾ ಸೊಪ್ಪು
ಹಸಿಮೆಣಸಿನಕಾಯಿ
ಈರುಳ್ಳಿ
ಶುಂಠಿ-ಬೆಳ್ಳುಳ್ಳಿ ಪೇಸ್ಟ್
ಎಣ್ಣೆ
ಸಾಸಿವೆ, ಕಡಲೆಬೇಳೆ, ಉದ್ದಿನಬೇಳೆ, ಗೋಡಂಬಿ, ಕರಿಬೇವು
ಅರಿಶಿಣ
ಉಪ್ಪು,
ನಿಂಬೆಹಣ್ಣಿನ ರಸ
ಮಾಡೋದು ಹೇಗೆ ನೋಡಿಕೊಳ್ಳಿ
ಮಿಕ್ಸಿ ಜಾರ್ನಲ್ಲಿ ತೊಳೆದ ಪುದೀನಾ ಸೊಪ್ಪು ಮತ್ತು ಹಸಿಮೆಣಸಿನಕಾಯಿಯನ್ನು ಸ್ವಲ್ಪ ನೀರು ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ. ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ, ಸಾಸಿವೆ, ಕಡಲೆಬೇಳೆ, ಉದ್ದಿನಬೇಳೆ ಮತ್ತು ಗೋಡಂಬಿಯನ್ನು ಗೋಲ್ಡನ್ ಬ್ರೌನ್ ಬರುವವರೆಗೆ ಹುರಿಯಿರಿ. ಇದಕ್ಕೆ ಕತ್ತರಿಸಿದ ಈರುಳ್ಳಿ ಮತ್ತು ಕರಿಬೇವು ಸೇರಿಸಿ, ಈರುಳ್ಳಿ ಗುಲಾಬಿ ಬಣ್ಣ ಬರುವವರೆಗೆ ಬಾಡಿಸಿ. ನಂತರ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಹಾಕಿ ಹಸಿವಾಸನೆ ಹೋಗುವವರೆಗೆ ಕೈಯಾಡಿಸಿ. ಈಗ ರುಬ್ಬಿಕೊಂಡ ಪುದೀನಾ ಪೇಸ್ಟ್, ಅರಿಶಿಣ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ. ಎಣ್ಣೆ ಬಿಡುವವರೆಗೆ ಮಧ್ಯಮ ಉರಿಯಲ್ಲಿ ಚೆನ್ನಾಗಿ ಬಾಡಿಸಿ. ಸ್ಟವ್ ಆಫ್ ಮಾಡಿ, ಬೇಯಿಸಿದ ಅನ್ನ ಹಾಗೂ ನಿಂಬೆಹಣ್ಣಿನ ರಸವನ್ನು ಹಾಕಿ ಮಸಾಲೆ ಎಲ್ಲೆಡೆ ಚೆನ್ನಾಗಿ ಹಿಡಿಯುವಂತೆ ನಿಧಾನವಾಗಿ ಕಲಸಿದರೆ ಬಿಸಿಬಿಸಿಯಾದ ರುಚಿಕರ ಹಾಗೂ ಪರಿಮಳಯುಕ್ತ ಪುದೀನಾ ರೈಸ್ ಸಿದ್ಧ!
ಇದನ್ನ ತಿಂದ್ರೆ ಏನ್ ಲಾಭ?
ಪುದೀನಾದಲ್ಲಿರುವ ನೈಸರ್ಗಿಕ ಗುಣಗಳು ಹೊಟ್ಟೆ ಉಬ್ಬರ, ಅಜೀರ್ಣ ಮತ್ತು ಗ್ಯಾಸ್ಟ್ರಿಕ್ ಸಮಸ್ಯೆಗಳನ್ನು ದೂರವಿಡುತ್ತದೆ.
ಇದು ಚಯಾಪಚಯ ಕ್ರಿಯೆಯನ್ನು ಚುರುಕುಗೊಳಿಸಿ ಕೊಬ್ಬು ಕರಗಿಸಲು ನೆರವಾಗುತ್ತದೆ.
ವಿಟಮಿನ್ ಸಿ ಮತ್ತು ಆಂಟಿಆಕ್ಸಿಡೆಂಟ್ಗಳಿಂದ ಕೂಡಿರುವುದರಿಂದ ಶೀತ, ಕೆಮ್ಮು ಮತ್ತು ಇತರೆ ಸೋಂಕುಗಳ ವಿರುದ್ಧ ಹೋರಾಡುತ್ತದೆ.



