November 15, 2026
Sunday, November 15, 2026
spot_img

ದಿನಭವಿಷ್ಯ: ಅತ್ಯಂತ ಅನುಕೂಲಕರ ದಿನ, ಸಣ್ಣ ಪ್ರಯತ್ನಕ್ಕೂ ದೊಡ್ಡ ಮಟ್ಟದ ಯಶಸ್ಸು ಸಿಗಲಿದೆ

ಮೇಷ
ಕಡಿಮೆ ಪ್ರಯತ್ನ ದಿಂದ ಹೆಚ್ಚಿನ ಫಲ ಪಡೆಯುವಿರಿ. ಆರ್ಥಿಕ ಸ್ಥಿತಿ ಸಂತೃಪ್ತಿ ತರುವುದು. ಆರೋಗ್ಯ ವಿಷಯದಲ್ಲಿ ಸಮಾಧಾನ.
ವೃಷಭ
ಕಳೆದುದನ್ನು ಚಿಂತಿಸುತ್ತಾ ಕೊರಗದಿರಿ. ಉದ್ಯೋಗ ಅವಕಾಶ ಲಭ್ಯ. ಕೆಲವರಿಗೆ ಇಂದು ಭಾವನಾತ್ಮಕ ಏರುಪೇರು ಉಂಟಾಗಬಹುದು.
ಮಿಥುನ
ಭಾವುಕ ಮನಸ್ಥಿತಿ. ನಿರುದ್ಯೋಗಿಗಳಿಗೆ ಶುಭ ಸುದ್ದಿ. ಸ್ನೇಹಿತರ ಸಹಕಾರ. ಆರ್ಥಿಕ ಪರಿಸ್ಥಿತಿ ತೃಪ್ತಿಕರ. ಅನಾರೋಗ್ಯ ಆಗಿದ್ದರೆ ನಿರ್ಲಕ್ಷಿಸದಿರಿ.
ಕಟಕ
ಕುಟಂಬವೇ ನಿಮ್ಮ ಸಂತೋಷದ ಮೂಲ. ಅವರ ಹಿತಾಸಕ್ತಿಗೆ ಹೆಚ್ಚು ಗಮನ ಕೊಡಿ. ಆರ್ಥಿಕ ಪರಿಸ್ಥಿತಿ ಉತ್ತೇಜನಕಾರಿ. ಕೌಟುಂಬಿಕ ಸಮ್ಮಿಲನ.
ಸಿಂಹ
ಸಮಸ್ಯೆಯೊಂದು ಮೂಡಿದರೂ ಬೇಗನೆ ಪರಿಹಾರವೂ ಕಾಣಲಿದೆ. ಸ್ನೇಹಿತರು, ಕುಟುಂಬದ ಸಂಪರ್ಕ ತಪ್ಪಿಸದಿರಿ. ಪ್ರೀತಿಯಲ್ಲಿ ಯಶಸ್ಸು.
ಕನ್ಯಾ
ನಿಮ್ಮ ಸುತ್ತಮುತ್ತ ಉಲ್ಲಾಸದ ವಾತಾವರಣ ಸೃಷ್ಟಿಸಿ. ನೀವೇ ಉದಾಸ ಭಾವ ತಾಳದಿರಿ. ಕುಟುಂಬದ ಜತೆ ಕಾಲ ಕಳೆಯುವ ಅವಕಾಶ.
ತುಲಾ
ಭವಿಷ್ಯದ ಬಗ್ಗೆ ಯೋಜನೆ ರೂಪಿಸಲು ಸಕಾಲ. ಆರ್ಥಿಕ ಒತ್ತಡ ಸಂಭವ. ವೃತ್ತಿಯಲ್ಲಿ ಯಾವುದೇ ವಾದಕ್ಕೆ ಇಳಿಯದಿರಿ.
ವೃಶ್ಚಿಕ
ಈ ದಿನ ನಿಮ್ಮದು. ಎಲ್ಲವೂ ನಿಮ್ಮ ಇಚ್ಛೆಯಂತೆ ಸಾಗಲಿದೆ. ಆರ್ಥಿಕ ಪ್ರಗತಿ ಸಮಾಧಾನ ತರುವುದು. ಬಹುಕಾಲದ ಬೇಡಿಕೆ ಈಡೇರಲಿದೆ.
ಧನು
ದ್ವಂದ್ವದ ಮನಸ್ಥಿತಿ ಇಂದು ಎದುರಿಸುವಿರಿ. ಪರಿಸ್ಥಿತಿಗೆ ತಕ್ಕಂತೆ ನಡಕೊಳ್ಳಿ. ಬಿಕ್ಕಟ್ಟನ್ನು ಕೌಶಲದಿಂದ ನಿಭಾಯಿಸಿ. ಬಂಧುಗಳ ಭೇಟಿ.
ಮಕರ
ನಿಮ್ಮ ಸಂಹವನ ಕಲೆ ಬಿಕ್ಕಟ್ಟು ನಿವಾರಣೆಗೆ ಸಹಕಾರಿ. ಆರ್ಥಿಕ ಪ್ರಗತಿ. ಅತಿಯಾದ ದೇಹಾಭ್ಯಾಸ ಬೇಡ. ದೈಹಿಕ ನೋವು ಕಾಣಿಸಿಕೊಳ್ಳಬಹುದು.
ಕುಂಭ
ನಿಮ್ಮ ಉದ್ದೇಶ ಸಾಧಿಸಲು ಆದ್ಯತೆ ಕೊಡಿ. ಬೇರೆ ವಿಷಯಗಳನ್ನು ಬದಿಗೆ ಸರಿಸಿ. ದೇಹಕ್ಕೆ ಒಗ್ಗದ ಆಹಾರ, ಪಾನೀಯ ಸೇವಿಸದಿರಿ.
ಮೀನ
ನಿಮ್ಮ ಸ್ನೇಹಿತರ ವರ್ತುಲ ಹೆಚ್ಚಲಿದೆ. ಆಶಾವಾದ ಹೆಚ್ಚಿಸುವ ಬೆಳವಣಿಗೆ ಕಾಣುವಿರಿ. ಒತ್ತಡವು ನಿದ್ರಾಹೀನತೆಗೆ ಕಾರಣವಾದೀತು.

Must Read

Skip to toolbar