November 15, 2026
Sunday, November 15, 2026
spot_img

ಬಂಗಾರ ಪ್ರಿಯರಿಗೆ ಸಿಹಿಸುದ್ದಿ: ಚಿನ್ನ, ಬೆಳ್ಳಿ ಬೆಲೆಯಲ್ಲಿ ಭರ್ಜರಿ ಇಳಿಕೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಚಿನ್ನ ಹಾಗೂ ಬೆಳ್ಳಿ ಖರೀದಿಸಲು ಕಾಯುತ್ತಿದ್ದ ಜನಸಾಮಾನ್ಯರಿಗೆ ಇದೀಗ ಶುಭಸುದ್ದಿ ಸಿಕ್ಕಿದೆ. ವಾರಾಂತ್ಯದಲ್ಲೂ ಮುಂದುವರಿದ ಬೆಲೆ ಇಳಿಕೆಯು ಗ್ರಾಹಕರಲ್ಲಿ ಮೊಗದಲ್ಲಿ ಮಂದಹಾಸ ಮೂಡಿಸಿದೆ. ಕಳೆದ ಒಂದು ತಿಂಗಳಿಂದ ಈ ಅಮೂಲ್ಯ ಲೋಹಗಳ ಮೌಲ್ಯ ನಿರಂತರವಾಗಿ ಇಳಿಯುತ್ತಿರುವುದು ಹೂಡಿಕೆದಾರರ ಗಮನ ಸೆಳೆದಿದೆ.

ಕಳೆದ ಒಂದು ತಿಂಗಳ ಅವಧಿಯಲ್ಲಿ ಬಂಗಾರದ ಬೆಲೆಯಲ್ಲಿ ಬರೋಬ್ಬರಿ 965 ರೂಪಾಯಿಗಳಷ್ಟು ಭರ್ಜರಿ ಇಳಿಕೆ ಕಂಡುಬಂದಿದೆ. ಇದರೊಂದಿಗೆ ಬೆಳ್ಳಿ ಬೆಲೆಯೂ ಕೂಡ ಗಮನಾರ್ಹ ಕುಸಿತವನ್ನು ದಾಖಲಿಸಿದೆ. ಮಾರುಕಟ್ಟೆ ತಜ್ಞರ ಪ್ರಕಾರ, ಎಂಸಿಎಕ್ಸ್ ಹಾಗೂ ಸ್ಪಾಟ್ ಮಾರುಕಟ್ಟೆಯ ದರಗಳಲ್ಲೂ ಈ ಇಳಿಕೆಯ ಪ್ರವೃತ್ತಿ ಸ್ಪಷ್ಟವಾಗಿ ಗೋಚರಿಸಿದೆ.

ದೇಶದ ವಿವಿಧ ಭಾಗಗಳಲ್ಲಿ ಇಂದಿನ ಪ್ರಮುಖ ದರಗಳು ಈ ಕೆಳಗಿನಂತಿವೆ:

22 ಕ್ಯಾರೆಟ್ ಚಿನ್ನ: 10 ಗ್ರಾಂಗೆ 1,26,150 ರೂ.

24 ಕ್ಯಾರೆಟ್ ಅಪರಂಜಿ ಚಿನ್ನ: 10 ಗ್ರಾಂಗೆ 1,37,620 ರೂ.

ಬೆಳ್ಳಿ ಬೆಲೆ: ಬೆಂಗಳೂರಿನಲ್ಲಿ 100 ಗ್ರಾಂಗೆ 20,000 ರೂ., ತಮಿಳುನಾಡು ಹಾಗೂ ಕೇರಳದ ಕೆಲ ಭಾಗಗಳಲ್ಲಿ 100 ಗ್ರಾಂಗೆ 19,500 ರೂ. ವರೆಗೆ ಇದೆ.

ಬೆಲೆಗಳು ಗಗನಕ್ಕೇರಿದ್ದ ಕಾಲದಲ್ಲಿ ಆಭರಣ ಖರೀದಿಸಲು ಹಿಂಜರಿಯುತ್ತಿದ್ದವರಿಗೆ ಈ ದರ ಕುಸಿತವು ಸುವರ್ಣಾವಕಾಶ ಕಲ್ಪಿಸಿದೆ. ಮಾರುಕಟ್ಟೆಯ ಈ ತಾತ್ಕಾಲಿಕ ಇಳಿಕೆಯ ಪ್ರಯೋಜನವನ್ನು ಪಡೆದುಕೊಳ್ಳಲು ಇದುವೇ ಸರಿಯಾದ ಸಮಯ ಎನ್ನಬಹುದು.

Must Read

Skip to toolbar