ಏನೇನ್ ಬೇಕು?
ಶಾವಿಗೆ
ಈರುಳ್ಳಿ
ಹಸಿಮೆಣಸಿನಕಾಯಿ
ಟೊಮೆಟೊ
ಕ್ಯಾರೆಟ್, ಬೀನ್ಸ್
ಎಣ್ಣೆ
ಸಾಸಿವೆ, ಜೀರಿಗೆ, ಕಡಲೆಬೇಳೆ, ಉದ್ದಿನಬೇಳೆ
ಕರಿಬೇವಿನ ಸೊಪ್ಪು, ಕೊತ್ತಂಬರಿ ಸೊಪ್ಪು
ಉಪ್ಪು
ನೀರು
ಮಾಡೋದು ಹೇಗೆ ನೋಡಿಕೊಳ್ಳಿ
ಮೊದಲು ಬಾಣಲೆಯಲ್ಲಿ ಒಂದು ಚಮಚ ಎಣ್ಣೆ ಹಾಕಿ, ಶಾವಿಗೆಯನ್ನು ಗೋಲ್ಡನ್ ಬ್ರೌನ್ ಬರುವವರೆಗೆ ಹುರಿದು ಪಕ್ಕಕ್ಕೆ ತೆಗೆದಿಟ್ಟುಕೊಳ್ಳಿ. ಅದೇ ಬಾಣಲೆಯಲ್ಲಿ ಎಣ್ಣೆ ಹಾಕಿ, ಸಾಸಿವೆ, ಜೀರಿಗೆ, ಕಡಲೆಬೇಳೆ, ಉದ್ದಿನಬೇಳೆ, ಕರಿಬೇವಿನ ಸೊಪ್ಪು ಮತ್ತು ಹಸಿಮೆಣಸಿನಕಾಯಿ ಹಾಕಿ ಸಿಡಿಸಿ. ನಂತರ ಹೆಚ್ಚಿದ ಈರುಳ್ಳಿ ಹಾಕಿ ಸ್ವಲ್ಪ ಬಾಡಿಸಿ, ಬಳಿಕ ಟೊಮೆಟೊ ಮತ್ತು ಇಷ್ಟವಾದ ತರಕಾರಿಗಳನ್ನು ಸೇರಿಸಿ ಮೆದುವಾಗುವವರೆಗೆ ಬೇಯಿಸಿ. ಇದಕ್ಕೆ 2 ಕಪ್ ನೀರು ಮತ್ತು ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚೆನ್ನಾಗಿ ಕುದಿಸಿ. ನೀರು ಕುದಿಯುತ್ತಿದ್ದಂತೆ ಹುರಿದಿಟ್ಟ ಶಾವಿಗೆಯನ್ನು ಹಾಕಿ, ಉರಿಯನ್ನು ಕಡಿಮೆ ಮಾಡಿ ಮುಚ್ಚಳ ಮುಚ್ಚಿ ನೀರು ಬತ್ತುವವರೆಗೆ ಬೇಯಿಸಿದರೆ, ಘಮಘಮಿಸುವ ಶಾವಿಗೆ ಬಾತ್ ಸಿದ್ಧ!
ಇದನ್ನ ತಿಂದ್ರೆ ಏನ್ ಲಾಭ?
ಇದು ಹೊಟ್ಟೆಗೆ ಭಾರವಾಗದೆ, ಅತ್ಯಂತ ಸುಲಭವಾಗಿ ಜೀರ್ಣವಾಗುವ ಹಗುರವಾದ ತಿಂಡಿಯಾಗಿದೆ.
ಕಾರ್ಬೋಹೈಡ್ರೇಟ್ಗಳು ಸಮೃದ್ಧವಾಗಿರುವುದರಿಂದ ದಿನದ ಆರಂಭಕ್ಕೆ ಬೇಕಾದ ಚೈತನ್ಯ ಮತ್ತು ಶಕ್ತಿಯನ್ನು ನೀಡುತ್ತದೆ.
ಹಸಿ ತ್ರಕಾರಿಗಳೊಂದಿಗೆ (ಕ್ಯಾರೆಟ್, ಬೀನ್ಸ್, ಬಟಾಣಿ) ಮಾಡಿದರೆ ತೂಕ ಇಳಿಸಿಕೊಳ್ಳಲು ಬಯಸುವವರಿಗೂ ಇದು ಉತ್ತಮ ಆಯ್ಕೆ.
ಇದರಲ್ಲಿ ವಿಟಮಿನ್ ಮತ್ತು ನಾರಿನಾಂಶವಿರುವ ತರಕಾರಿಗಳನ್ನು ಸೇರಿಸುವುದರಿಂದ ದೇಹಕ್ಕೆ ಬೇಕಾದ ಪೋಷಕಾಂಶಗಳು ಒಮ್ಮೆಗೆ ಸಿಗುತ್ತವೆ.



