ಹೊಸದಿಗಂತ ಡಿಜಿಟಲ್ ಡೆಸ್ಕ್:
ಅರ್ನಬ್, ಮುರುಸು ಬಳಿಕ ಬಂಗಾಳಕೊಲ್ಲಿಯಲ್ಲಿ ಮತ್ತೊಂದು ಭೀಕರ ಸೈಕ್ಲೋನ್ ಸೃಷ್ಟಿಯಾಗುತ್ತಿದ್ದು, ಕೆಲ ರಾಜ್ಯಗಳಿಗೆ ಬಿರುಗಾಳಿ ಸಹಿತ ಭಾರೀ ಮಳೆಯಾಗಲಿದೆ.
ಕೋಲ್ಕತ್ತಾ ಬಂಗಾಳಕೊಲ್ಲಿಯಲ್ಲಿ ನಿರ್ಮಾಣವಾಗುತ್ತಿರುವ ಅಕ್ವನ್ ಚಂಡಮಾರುತ ನಾಳೆಯಿಂದ ತೀವ್ರ ಸ್ವರೂಪ ಪಡೆಯಲಿದ್ದು, ಪಶ್ಚಿಮ ಬಂಗಾಳ, ಒಡಿಶಾ, ಆಂಧ್ರಪ್ರದೇಶ, ಪುದುಚೇರಿ ಹಾಗೂ ತಮಿಳುನಾಡಿನ ಕರಾವಳಿಗೆ ಪ್ರದೇಶಗಳಿಗೆ ಕಟ್ಟೆಚ್ಚ ನೀಡಲಾಗಿದೆ. ತಮಿಳುನಾಡು, ಆಂಧ್ರ, ಒಡಿಶಾ, ಬಂಗಾಳದಲ್ಲಿ ಭಾರೀ ಗಾಳಿ ನಾನಾ ಅವಾತರ ಸೃಷ್ಟಿಸೋ ಸಾಧ್ಯತೆ ಇದೆ.
ವಾಯುಭಾರ ಕುಸಿತದಿಂದಾಗಿ ಭಾನುವಾರವೇ ತಮಿಳುನಾಡಿನ ಚೆಂಗಲ್ಪಟ್ಟು ಚೆನ್ನೈ, ಕಾಂಚೀಪುರಂ, ಕನ್ಯಾಕುಮಾರಿ ಮೊದಲಾದೆಡೆ ಮಳೆ ಸುರಿಯುತ್ತಿದೆ. ಆಂಧ್ರ, ಒಡಿಶಾ, ಬಂಗಾಳದಲ್ಲೂ ಇದೇ ವಾತಾವರಣ ಇದೆ.ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯು ಭಾರ ಕುಸಿತವು, ನ,16ರ ಸಂಜೆಯ ವೇಳೆಗೆ ಚಂಡಮಾರುತವಾಗಿ ಬದಲಾಗುವ ಸಾಧ್ಯತೆ ಇದ್ದು, ನವೆಂಬರ್ 17 ರಂದು ತೀವ್ರ ಚಂಡಮಾರುತವಾಗಿ ಮತ್ತು ನ.19ರ ವೇಳೆಗೆ ಅತಿ ತೀವ್ರ ಚಂಡಮಾರುತವಾಗಿ ಬಲಗೊಳ್ಳುವ ಮುನ್ಸೂಚನೆ ಇದೆ.
ಆಂಧ್ರ ಕರಾವಳಿಗೆ ಇಂದು-ನಾಳೆ ಅಪ್ಪಳಿಸುವ ಸಾಧ್ಯತೆ ಇದೆ. ನ.19ರಿಂದ 21ರವರೆಗೆ ಮಳೆ ತೀವ್ರ ಸ್ವರೂಪಿಯಾಗಿರಲಿದೆ ಎನ್ನಲಾಗಿದೆ. ಈ ಸೈಕ್ಲೋನ್ ಎಫೆಕ್ಟ್ನಿಂದಾಗಿ ಹಲವು ಭಾಗಗಳಲ್ಲಿ ಗಾಳಿ ಸಹಿತ ಭಾರೀ ಮಳೆಯಾಗೋ ಸಾಧ್ಯತೆ ಇದೆ.



