November 16, 2026
Monday, November 16, 2026
spot_img

150 ಕೋಟಿ ಕ್ಲಬ್ ಸೇರಿದ ‘ಸೀನ್’: ಮುಂದಿನ ವಾರ ಬಾಕ್ಸಾಫೀಸ್‌ನಲ್ಲಿ ಹೊಸ ಪೈಪೋಟಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಟಾಲಿವುಡ್ ಮಾತ್ರ ಅಲ್ಲದೆ, ಇಡೀ ಭಾರತೀಯ ಚಿತ್ರರಂಗದಲ್ಲಿ ತಮಿಳಿನ ಹೊಸ ಕಾಮಿಡಿ-ಕಾಪ್ ಡ್ರಾಮಾ ಸಿನಿಮಾ ‘ಸೀನ್’ ಬಾಕ್ಸ್‌ಆಫೀಸ್‌ನಲ್ಲಿ ಸಖತ್ ಸದ್ದು ಮಾಡುತ್ತಿದೆ. ಜಿತು ಮಾಧವನ್ ನಿರ್ದೇಶನದ ಈ ಚಿತ್ರವು ಬಿಡುಗಡೆಯಾದಾಗಿನಿಂದಲೂ ಪ್ರೇಕ್ಷಕರನ್ನು ಥಿಯೇಟರ್‌ಗಳತ್ತ ಸೆಳೆಯುವಲ್ಲಿ ಯಶಸ್ವಿಯಾಗಿದೆ.

ಚಿತ್ರವು ತನ್ನ ಎರಡನೇ ಭಾನುವಾರ ಒಂದೇ ದಿನ ಬರೋಬ್ಬರಿ 10 ಕೋಟಿ ರೂಪಾಯಿ ಬಾಚಿಕೊಳ್ಳುವ ಮೂಲಕ ತನ್ನ ಗಲ್ಲಾಪೆಟ್ಟಿಗೆಯ ಅಧಿಕಾರವನ್ನು ಗಟ್ಟಿಗೊಳಿಸಿದೆ. ಇದರೊಂದಿಗೆ ಚಿತ್ರವು ತನ್ನ ಎರಡನೇ ವಾರಾಂತ್ಯವನ್ನು 26.75 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್‌ನೊಂದಿಗೆ ಮುಕ್ತಾಯಗೊಳಿಸಿದೆ. ಮೊದಲ ವಾರದ ಭರ್ಜರಿ ಕಮಾಯಿ 126 ಕೋಟಿ ರೂ. ಸೇರಿಕೊಂಡು, ಭಾರತೀಯ ಬಾಕ್ಸ್‌ಆಫೀಸ್‌ನಲ್ಲಿ ‘ಸೀನ್’ ಚಿತ್ರದ ಒಟ್ಟು ಗಳಿಕೆ ಈಗ 152.75 ಕೋಟಿ ರೂಪಾಯಿಗಳಿಗೆ ಏರಿದೆ.

ನಟ ಸೂರ್ಯ ಅವರ ತವರು ನೆಲವಾದ ತಮಿಳುನಾಡಿನಲ್ಲಿ ಈ ಚಿತ್ರಕ್ಕೆ ಅತ್ಯಧಿಕ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಇಲ್ಲಿಯವರೆಗೆ ಅಂದಾಜು 76 ಕೋಟಿ ರೂ. ಸಂಗ್ರಹಿಸಿದೆ. ಒಟ್ಟು ರನ್ ಮುಗಿಯುವಷ್ಟರಲ್ಲಿ ಕೇವಲ ತಮಿಳುನಾಡೊಂದರಲ್ಲೇ 90 ರಿಂದ 100 ಕೋಟಿ ರೂ. ಗಳಿಸುವ ಗುರಿಯನ್ನು ಇದು ಹೊಂದಿದೆ. ಕೇರಳದಲ್ಲಿ 27.75 ಕೋಟಿ ರೂ., ಕರ್ನಾಟಕದಲ್ಲಿ 16.25 ಕೋಟಿ ರೂ. ಹಾಗೂ ತೆಲುಗು ರಾಜ್ಯಗಳಲ್ಲಿ 29.50 ಕೋಟಿ ರೂ. ಬಾಚಿಕೊಳ್ಳುವ ಮೂಲಕ ಸಾಲಿಡ್ ಕಲೆಕ್ಷನ್ ದಾಖಲಿಸಿದೆ.

ಈ ವಾರದಿಂದ ಧನುಷ್ ಮತ್ತು ಮಮ್ಮುಟ್ಟಿ ನಟನೆಯ ‘ಓಂ ಚಾಪ್ಟರ್ 1’ ಸಿನಿಮಾ ಬಿಡುಗಡೆಯಾಗುತ್ತಿರುವುದರಿಂದ, ‘ಸೀನ್’ ಚಿತ್ರಕ್ಕೆ ಬಾಕ್ಸ್‌ಆಫೀಸ್‌ನಲ್ಲಿ ಪೈಪೋಟಿ ಎದುರಾಗಲಿದೆ. ಆದಾಗ್ಯೂ, ಈಗಾಗಲೇ ಕ್ಲೀನ್ ಹಿಟ್ ಹಣೆಪಟ್ಟಿ ಪಡೆದಿರುವ ಈ ಚಿತ್ರ, ಈ ವರ್ಷ ಸೂರ್ಯ ಅವರ ವೃತ್ತಿಜೀವನದಲ್ಲಿ ಸತತ ಮೂರನೇ ಯಶಸ್ಸನ್ನು ತಂದುಕೊಟ್ಟ ಹೆಗ್ಗಳಿಗೆ ಪಾತ್ರವಾಗಿದೆ.

Must Read

Skip to toolbar