November 16, 2026
Monday, November 16, 2026
spot_img

ಬೆಂಗಳೂರಿನಲ್ಲಿ ಕಾಮನ್‌ವೆಲ್ತ್ ಮಹಿಳಾ ಸಂಸದರ ಸಮ್ಮೇಳನ : ಸ್ಪೀಕರ್‌ ಓಂ ಬಿರ್ಲಾರಿಂದ ಉದ್ಘಾಟನೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ನಾಳೆಯಿಂದ ಬೆಂಗಳೂರಿನ ವಿಧಾನಸೌಧದಲ್ಲಿ ಕಾಮನ್‌ವೆಲ್ತ್‌ ಮಹಿಳಾ ಸಂಸದ ಭಾರತ ಪ್ರಾಂತ್ಯದ ಸಮ್ಮೇಳನ ನಡೆಯಲಿದ್ದು, ಲೋಕಸಭೆ ಸ್ಪೀಕರ್‌ ಓಂ ಬಿರ್ಲಾ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಲಿದ್ದಾರೆ.

ಉದ್ಘಾಟನಾ ಸಮಾರಂಭದಲ್ಲಿ ಕರ್ನಾಟಕದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಭಾಗವಹಿಸಿ ಮುಖ್ಯ ಭಾಷಣ ಮಾಡಲಿದ್ದಾರೆ. ರಾಜ್ಯಸಭೆಯ ಉಪಸಭಾಪತಿ ಹರಿವಂಶ್, ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಕರ್ನಾಟಕ ವಿಧಾನಸಭೆಯ ಸಭಾಧ್ಯಕ್ಷರಾದ ಜಿ.ಎಸ್.ಪಾಟೀಲ್ ಮತ್ತು ಸಿಡಬ್ಲ್ಯೂಪಿ ಭಾರತ ಪ್ರಾಂತ್ಯದ ಅಧ್ಯಕ್ಷರಾದ ಶ್ರೀಮತಿ ದಗ್ಗುಬಾಟಿ ಪುರಂದೇಶ್ವರಿ ಅವರೂ ಸಹ ಗೋಷ್ಠಿಯಲ್ಲಿ ಪಾಲ್ಗೊಂಡು ಸಭೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ.

ಕರ್ನಾಟಕ ವಿಧಾನ ಪರಿಷತ್ತಿನ ಸಭಾಪತಿ ಸಲೀಂ ಅಹ್ಮದ್ ಅವರು ಸ್ವಾಗತ ಭಾಷಣ ಮಾಡಲಿದ್ದು, ಕರ್ನಾಟಕ ವಿಧಾನ ಪರಿಷತ್ತಿನ ಉಪಸಭಾಪತಿ ಡಾ.ಉಮಾಶ್ರೀ ವಂದನಾರ್ಪಣೆ ಸಲ್ಲಿಸಲಿದ್ದಾರೆ. ಸಂಸತ್ತು ಮತ್ತು ರಾಜ್ಯ/ಕೇಂದ್ರಾಡಳಿತ ಪ್ರದೇಶಗಳ ವಿಧಾನಮಂಡಲಗಳ ಮಹಿಳಾ ಶಾಸಕರು ಹಾಗೂ ಇತರ ಗಣ್ಯರು ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ. ಎರಡು ದಿನಗಳ ಈ ಸಮ್ಮೇಳನ ನಡೆಯಲಿದ್ದು, ಸದೃಢ ಅಡಿಪಾಯಗಳು, ಬಲವಾದ ಧ್ವನಿಗಳು: ಹೊಸ ಮಹಿಳಾ ಶಾಸಕರಿಗಾಗಿ ಒಳಗೊಳ್ಳುವ ಸೈಬರ್‌ಸ್ಪೇಸ್ ಮತ್ತು ಮಾರ್ಗದರ್ಶನದ ಹಾದಿಗಳು ಎಂಬುದು ಇದರ ಧ್ಯೇಯವಾಕ್ಯವಾಗಿದೆ.

Must Read