November 16, 2026
Monday, November 16, 2026
spot_img

30 ಅಡಿ ಆಳದ ಬಾವಿಗೆ ಬಿದ್ದ ಆಕಳಿಗೆ ಅಗ್ನಿಶಾಮಕ ಸಿಬ್ಬಂದಿಯಿಂದ ಮರುಜೀವ

ಹೊಸದಿಗಂತ ವರದಿ ಯಲ್ಲಾಪುರ:

ಯಲ್ಲಾಪುರ ತಾಲ್ಲೂಕಿನ ಕಲಗದ್ದೆ ಗ್ರಾಮದಲ್ಲಿ ಆಕಳೊಂದು ಕಾಲುಜಾರಿ ತೆರೆದ ಬಾವಿಗೆ ಬಿದ್ದಿದ್ದು, ಯಲ್ಲಾಪುರ ಅಗ್ನಿಶಾಮಕ ಠಾಣೆಯ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿ ಸುರಕ್ಷಿತವಾಗಿ ಮೇಲಕ್ಕೆತ್ತಿದ್ದಾರೆ.

ಕಲಗದ್ದೆ ಗ್ರಾಮದ ಶಿವರಾಮ ವೆಂಕಟ್ರಮಣ ಹೆಗಡೆ ಎಂಬುವವರ ಜಮೀನಿನಲ್ಲಿದ್ದ ಸುಮಾರು 30 ಅಡಿ ಆಳದ ತೆರೆದ ಬಾವಿಗೆ ಆಕಳು ಕಾಲುಜಾರಿ ಬಿದ್ದಿತ್ತು. ವಿಷಯ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿದ ಯಲ್ಲಾಪುರ ಅಗ್ನಿಶಾಮಕ ಠಾಣೆಯ ಸಿಬ್ಬಂದಿ, ಹಗ್ಗ ಹಾಗೂ ಫೈರ್ ಹೋಸ್ ಸಹಾಯದಿಂದ ಕಾರ್ಯಾಚರಣೆ ನಡೆಸಿ ಆಕಳನ್ನು ಯಾವುದೇ ಅಪಾಯವಿಲ್ಲದೆ ಮೇಲಕ್ಕೆ ಎತ್ತಿ ಕಾಪಾಡಿದ್ದಾರೆ.

ಅಗ್ನಿಶಾಮಕ ಸಿಬ್ಬಂದಿಯ ಈ ಸಮಯೋಚಿತ ಕಾರ್ಯಕ್ಕೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕಾರ್ಯಾಚರಣೆಯಲ್ಲಿ ಎ ಎಪ್ ಎಸ್ ಓ ಸುಧೀರ್ ಕಿಂದಳ್ಕರ್, ಲೀಡಿಂಗ್ ಫೈರ್ ಫೈಟರ್ ಮಾರುತಿ ನಾಯ್ಕ್, ಡ್ರೈವರ್ ವಸಿಂ ಮೋಮಿನ್, ಕಾರ್ತಿಕ್, ಪೈರ್ ಫೈಟರ್ ಪ್ರದೀಪ, ಮಂಜುನಾಥ್ ಭಾಗವಹಿಸಿದ್ದರು.

Must Read

Skip to toolbar