ಹೊಸದಿಗಂತ ಡಿಜಿಟಲ್ ಡೆಸ್ಕ್:
ತಮಿಳುನಾಡಿದ ಪ್ರಸಿದ್ಧ ಗಿರಿಧಾಮವಾದ ಊಟಿಯಲ್ಲಿ ಸಹಿಸಲಾಗದಷ್ಟು ಚಳಿಯ ವಾತಾವರಣ ನಿರ್ಮಾಣವಾಗಿದೆ. ಮುಂಜಾನೆ ಹಾಗೂ ಸಂಜೆಯಲ್ಲಿ ತೀವ್ರ ಚಳಿ ವಾತಾವರಣವಿದ್ದು, ಬೆಳಗಿನ ಜಾವ ಇಡೀ ಊಟಿ ಮಂಜಿದ ಹೊದಿಕೆ ಹೊದ್ದಂತೆ ಕಾಣಿಸುತ್ತಿದೆ.
ನೀಲಗಿರಿಯ ಜಿಲ್ಲೆಯ ಊಟಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕನಿಷ್ಠ ತಾಪಮಾನ 5.9 ಡಿಗ್ರಿ ಸೆಲ್ಸಿಯಸ್ಗೆ ಕುಸಿದಿದೆ. ಸಾಮಾನ್ಯವಾಗಿ ನೀಲಗಿರಿ ಜಿಲ್ಲೆಯಲ್ಲಿ ಡಿಸೆಂಬರ್ 15ರ ನಂತರ ಹಿಮದ ಋತು ಆರಂಭವಾಗುತ್ತದೆ. ಆದರೆ ನವೆಂಬರ್ನಲ್ಲಿಯೇ ಹಿಮ ಆವರಿಸಿಕೊಂಡಿದ್ದು, ಪ್ರವಾಸಿಗರ ಸಂಖ್ಯೆ ಕೊಂಚ ಕಡಿಮೆಯಾಗಿದೆ.
ಊಟಿ ಸುತ್ತಮುತ್ತ ಹಿಮದ ಪರದ ಕಾಣಿಸುತ್ತದೆ. ವಾಹನಗಳು, ಮರಗಳು, ಗಿಡಗಳ ಮೇಲೆ ಬಿಳಿ ಹಿಮದ ಹೊದಿಕೆ ಆವರಿಸಿದೆ. ಈ ದೃಶ್ಯ ನೋಡಲು ಅದ್ಭುತವಾಗಿದೆ. ಕನಿಷ್ಠ ತಾಪಮಾನ 5.9 ಡಿಗ್ರಿ ಸೆಲ್ಸಿಯಸ್ಗೆ ಇಳಿದಿರುವುದರಿಂದ ಬೆಳಗಿನ ಜಾವ ಚಳಿ ತೀವ್ರವಾಗಿತ್ತು. ಸಾಮಾನ್ಯಕ್ಕಿಂತ ಮುಂಚಿತವಾಗಿ ಹಿಮದ ಋತು ಆರಂಭವಾಗಿರುವುದು ಈ ಬಾರಿಯ ನೀಲಗಿರಿಯ ವಿಶೇಷವಾಗಿದೆ. ಯಾವುದೇ ದೂರದ ದೇಶದಂತೆ ಊಟಿ ಕಾಣಿಸುತ್ತಿದ್ದು, ಊಟಿಗೆ ತೆರಳುವವರು ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡು ಹೋಗುವುದು ಸೂಕ್ತವಾಗಿದೆ.



