ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರಿನ ಬಾಗಲೂರಿನಲ್ಲಿ ಕಾರಿನಲ್ಲೇ ವ್ಯಕ್ತಿಯನ್ನು ಶೂಟ್ ಮಾಡಿ ಕೊಲೆ ಮಾಡಿದ ಪ್ರಕರಣದಲ್ಲಿನ ಪ್ರಮುಖ ಆರೋಪಿ ನವೀದ್ ಇಲಾಹಿ ಬೇಗ್ ಹಾಗೂ ಆತನ ಸಹಚರ ಮುಬಾರಕ್ನನ್ನು ಬಾಗಲೂರು ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಸ್ಕ್ರಾಪ್ ಬ್ಯುಸಿನೆಸ್ನಲ್ಲಿನ ವೈಷಮ್ಯದಿಂದಾಗಿ ಕೊಲೆ ನಡೆದಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಗಂಗೊಂಡನಹಳ್ಳಿಯಲ್ಲಿ ಗುಜರಿ ವ್ಯಾಪಾರ ನಡೆಸುತ್ತಿದ್ದ ನವೀದ್, ಬನ್ನೇರುಘಟ್ಟ ಮೂಲದ ಇಮ್ರಾಜ್ ಪಾಷಾಗೆ ಮೈಸೂರು ರಸ್ತೆ ಹಾಗೂ ಬ್ಯಾಟರಾಯನಪುರ ಭಾಗದಲ್ಲಿ ವ್ಯವಹಾರ ನಡೆಸದಂತೆ ಎಚ್ಚರಿಕೆ ನೀಡಿದ್ದ. ಇದ್ಯಾಗ್ಯೂ ಬೆದರಿಕೆಗೆ ಬಗ್ಗದೇ ಇಮ್ರಾಜ್ ಪಾಷಾ ತನ್ನ ವ್ಯಾಪಾರವನ್ನು ವಿಸ್ತಾರ ಮಾಡಿದ್ದರು. ಇದರಿಂದ ನವೀದ್ ಕೋಪಗೊಂಡಿದ್ದ. ಮಾತನಾಡಬೇಕು ಎಂದು ಇಮ್ರಾಜ್ರನ್ನು ಕರೆಸಿ ತನ್ನ ಲೈಸೆನ್ಸ್ಡ್ ಪಿಸ್ತೂಲ್ನಿಂದ ಶೂಟ್ ಮಾಡಿದ್ದಾಗಿ ಆರೋಪಿ ಹೇಳಿಕೊಂಡಿದ್ದಾನೆ.
ತಲೆಮರೆಸಿಕೊಂಡಿದ್ದ ಆರೋಪಿಯನ್ನು ವಿಜಯನಗರದ ಟೆಲಿಕಾಂ ಲೇಔಟ್ ನಿವಾಸದಲ್ಲಿ ವಶಕ್ಕೆ ಪಡೆಯಲಾಗಿದೆ. ಆರೋಪಿ ಕಾಂಗ್ರೆಸ್ ಪಕ್ಷದ ನಾಯಕರೊಂದಿಗೆ ಗುರುತಿಸಿಕೊಂಡಿರುವುದು ಬೆಳಕಿಗೆ ಬಂದಿದೆ. ಸದ್ಯ ಪಿಸ್ತೂಲ್ ವಶಪಡಿಸಿಕೊಂಡು ಎಫ್ಎಸ್ಎಲ್ಗೆ ಕಳುಹಿಸಿರುವ ಪೊಲೀಸರು, ಆರೋಪಿಯನ್ನು ಕೋರ್ಟ್ಗೆ ಹಾಜರುಪಡಿಸಿ ಹೆಚ್ಚಿನ ವಿಚಾರಣೆಗಾಗಿ ಕಸ್ಟಡಿಗೆ ಪಡೆಯಲು ಸಿದ್ಧತೆ ನಡೆಸಿದ್ದಾರೆ.



