ಹೊಸದಿಗಂತ ವರದಿ ರಾಮನಗರ :
ಮುಂದಿನ ಸರ್ಕಾರ ಯಾರದ್ದು ಅಂತ ತೀರ್ಮಾನ ಮಾಡೋದು ಜನ. ದೇವೇಗೌಡರು, ರೇವಣ್ಣ ತೀರ್ಮಾನ ಮಾಡೋದಲ್ಲ ಎಂದು ಸಚಿವ ಎಚ್.ಸಿ. ಬಾಲಕೃಷ್ಣ ತಿಳಿಸಿದರು.
ಡಿಕೆಶಿಗೆ ಕೆಲವರು ಕಿರುಕುಳ ಕೊಡ್ತಿದ್ದಾರೆ ಎಂಬ ನಿಶ್ಚಲಾನಂದ ಸ್ವಾಮೀಜಿ ಹೇಳಿಕೆ ಹಿನ್ನಲೆ ಸ್ವಾಮೀಜಿಗಳು ಸ್ವಾಮಿ ಕೆಲಸ ಮಾಡಿಕೊಂಡಿರಬೇಕು ಎಂಬ ರೇವಣ್ಣ ಹೇಳಿಕೆ ಕುರಿತು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೇವಣ್ಣ ಕುಟುಂಬದ ಪರವಾಗಿ ಸ್ವಾಮೀಜಿಗಳು ಮಾತನಾಡಿದ್ರೆ ಅವರಿಗೆ ರುಚಿಕರವಾಗಿರುತ್ತದೆ. ಬುದ್ಧಿ ಹೇಳಿದಾಗ ಸ್ವಾಮಿಗಳು ಹಾಗೆ ಹೇಳಬಾರದು ಅಂತಾರೆ, ಏನು ಮಾಡಲು ಆಗಲ್ಲ. 2028ಕ್ಕೆ ಕುಮಾರಸ್ವಾಮಿ ಸರ್ಕಾರ ಅಂತ ರೇವಣ್ಣ ಹೇಳಲಿ ಬಿಡಿ, ನಾವೇನು ಬೇಡ ಅಂತ ಹೇಳಿದ್ದೀವಾ? ಜನರ ತೀರ್ಮಾನವೇ ಅಂತಿಮ ಎಂದು ತಿಳಿಸಿದರು.
ಇದನ್ನೂ ಓದಿ:
ಇನ್ನೂ ಕೈಗಾರಿಕೆ ಸ್ಥಾಪನೆಗೆ ರಾಜ್ಯ ಸರ್ಕಾರ ಸಹಕಾರ ಕೊಡುತ್ತಿಲ್ಲ ಎಂಬ ಎಚ್‌ಡಿಕೆ ಆರೋಪದ ಬಗ್ಗೆಯೂ ಮಾತನಾಡಿ, ಕುಮಾರಸ್ವಾಮಿ ಕೇಂದ್ರ ಮಂತ್ರಿ ಆಗಿದ್ದಾರೆ. ಕೈಗಾರಿಕೆಗೆ ಜಾಗ ಕೊಡಲ್ಲ ಅಂತಿದ್ದಾರೆ. ಅದಕ್ಕಾಗಿ ಅವರಿಗೆ ಎಲ್ಲಿ ಜಾಗ ಬೇಕು ಕೇಳಲಿ ಕೊಡುತ್ತೇವೆ. ಯುವಕರು ಹೆಚ್ಚು ವೋಟ್ ಮಾಡಿದ್ದಾರೆ. ಯುವಕರು ಕುಮಾರಣ್ಣ ಅಂತ ಜಾಸ್ತಿ ಇಷ್ಟ ಪಡುತ್ತಾರೆ. ಆ ಯುವಕರಿಗೆ ಉದ್ಯೋಗ ಕೊಡತಕ್ಕಂತದ್ದು ಕುಮಾರಣ್ಣನ ಜವಾಬ್ದಾರಿ. ಅದಕ್ಕೆ ಜಾಗ ಕೊಡೋಕೆ ನಾವು ರೆಡಿ ಇದ್ದೇವೆ, ಅವ್ರು ಕೈಗಾರಿಕೆ ಮಾಡಲಿ. ಎಲ್ಲಿ ಜಾಗ ಬೇಕು ಅಂತ ನಾಳೆಯೇ ಪತ್ರ ಕೊಡಲಿ. ಯಾವ ಜಿಲ್ಲೆಯಲ್ಲಿ ಬೇಕಾದರೂ ಜಾಗ ಕೊಡಿಸುತ್ತೇವೆ ಎಂದರು.



