November 25, 2026
Wednesday, November 25, 2026
spot_img

ಬೆಂಗಳೂರಿನಲ್ಲಿ ಶುರುವಾಗಲಿದೆ ಹೂವುಗಳ ಹಬ್ಬ : ಕಬ್ಬನ್‌ ಪಾರ್ಕ್‌ನಲ್ಲಿ 13 ದಿನಗಳ ಫ್ಲವರ್‌ ಶೋ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಬೆಂಗಳೂರಿನ ಕಬ್ಬನ್‌ ಪಾರ್ಕ್‌ನಲ್ಲಿ ನ.25ರಿಂದ 13 ದಿನಗಳ ಕಾಲ ಹೂವಿನ ಹಬ್ಬ-2026 ಆಯೋಜಿಸಲಾಗಿದೆ. ಡಿ.7ರವರೆಗೆ ತೋಟಗಾರಿಕಾ ಇಲಾಖೆಯ ವತಿಯಿಂದ ಫ್ಲವರ್‌ ಶೋ ನಡೆಯಲಿದ್ದು, ಜನರು ಉತ್ಸಾಹ ತೋರುತ್ತಿದ್ದಾರೆ.

ರಾಜಧಾನಿ ಬೆಂಗಳೂರಿಗರಿಗೂ ಹೂವುಗಳಿಗೂ ಅವಿನಾಭಾವ ಸಂಬಂಧವಿದೆ. ವರ್ಷಕ್ಕೆ ಎರಡು ಬಾರಿ ನಡೆಯುವ ಫ್ಲವರ್‌ ಶೋಗೆ ಲಕ್ಷಾಂತರ ಮಂದಿ ಆಗಮಿಸಿ ಒಂದು ದಿನ ಹೂವುಗಳ ಮಧ್ಯೆ ಕಾಲ ಕಳೆಯುತ್ತಾರೆ. ನಗರ ಜೀವನದಲ್ಲಿ ಹಸಿರು, ಪ್ರಕೃತಿ, ಹೂವುಗಳು, ಸಾಂಸ್ಕೃತಿಕ ಚಟುವಟಿಕೆಗಳಿಗೆ ಹೆಚ್ಚಿನ ಮಹತ್ವ ನೀಡುವ ಸಲುವಾಗಿ ಹೂವಿನ ಹಬ್ಬವನ್ನು ಆಯೋಜಿಸಲಾಗಿದೆ.

ತೋಟಗಾರಿಕೆ ಇಲಾಖೆಯ ವತಿಯಿಂದ ನಡೆಯುವ ಹೂವಿನ ಹಬ್ಬದಲ್ಲಿ ವಿವಿಧ ಬಗೆಯ ಹೂವುಗಳು, ಅಲಂಕಾರಿಕ ಸಸ್ಯಗಳು, ಆಕರ್ಷಕ ಪುಷ್ಪ ವಿನ್ಯಾಸಗಳನ್ನು ನೋಡಬಹುದಾಗಿದೆ. ಈ ಬಾರಿ ಅಪರೂಪದ ಲಿಸಿಯಾಂಥಸ್‌, ಪೆಟೋನಿಯಾ, ಕ್ರೈಸಾಂಥಿಮಮ್‌, ಸೆಲೋಸಿಯಾ, ಕಾಕ್ಸ್‌ಬಾಂಬ್‌, ಜಿನಿಯಾ, ಡಯಾಂಥಸ್‌, ಇನ್ನಿತರ ಹೂವುಗಳನ್ನು ಪ್ರದರ್ಶಿಸಲಾಗುತ್ತದೆ.

ಹೂವಿನ ಹಬ್ಬಕ್ಕೆ ಭೇಟಿ ನೀಡುವ ಸಾರ್ವಜನಿಕರಿಗೆ ಪ್ರವೇಶ ಶುಲ್ಕ ನಿಗದಿಪಡಿಸಲಾಗಿದೆ. ವಾರದ ದಿನಗಳಲ್ಲಿ ವಯಸ್ಕರಿಗೆ 50 ರೂಪಾಯಿ ಹಾಗೂ ಮಕ್ಕಳಿಗೆ 20 ರೂಪಾಯಿ ಶುಲ್ಕ ಇರಲಿದೆ. ವಾರಾಂತ್ಯ ಮತ್ತು ಸರ್ಕಾರಿ ರಜೆ ದಿನಗಳಲ್ಲಿ ವಯಸ್ಕರಿಗೆ 80 ರೂಪಾಯಿ ಹಾಗೂ ಮಕ್ಕಳಿಗೆ 20 ರೂಪಾಯಿ ಪ್ರವೇಶ ಶುಲ್ಕ ವಿಧಿಸಲಾಗುತ್ತದೆ.

Must Read