ಹೊಸದಿಗಂತ ವರದಿ ವಿಜಯಪುರ:
ಅನುಮಾನಾಸ್ಪದ ರೀತಿಯಲ್ಲಿ ವ್ಯಕ್ತಿಯೊಬ್ಬನ ಶವ ಜಿಲ್ಲೆಯ ಹುಬ್ಬಳ್ಳಿ ರಸ್ತೆಯ ಹೊನಗನ ಹಳ್ಳಿ ಬಳಿಯ ಜಮೀನೊಂದರಲ್ಲಿ ಪತ್ತೆಯಾಗಿರುವ ಘಟನೆ ನಡೆದಿದೆ.
ಮೃತ ವ್ಯಕ್ತಿಯ ಹೆಸರು, ಗುರುತು ಪತ್ತೆಯಾಗಿಲ್ಲ. ಈತನ ಮೈಮೇಲೆ ಗಾಯದ ಗುರುತುಗಳಿದ್ದು, ಯಾರೋ ದುಷ್ಕರ್ಮಿಗಳು ಕೊಲೆ ಮಾಡಿ, ರಸ್ತೆ ಬದಿಯ ಜಮೀನಿನಲ್ಲಿ ಎಸೆದು ಹೋಗಿದ್ದಾರೆ ಎಂದು ಶಂಕಿಸಲಾಗಿದ್ದು, ದಾರಿ ಹೋಕರು ವಾಹನಗಳನ್ನು ನಿಲ್ಲಿಸಿ, ಪತ್ತೆಯಾದ ಶವವನ್ನು ವೀಕ್ಷಿಸಿ, ಗಾಬರಿಗೊಳ್ಳುವಂತಾಗಿದೆ.
ಬಬಲೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.



