November 26, 2026
Thursday, November 26, 2026
spot_img

ತುಂಗಾ ನದಿಯಲ್ಲಿ ದುರಂತ: ನೀರಿಗೆ ಬಿದ್ದ ಸ್ನೇಹಿತನ ರಕ್ಷಣೆಗೆ ಹೋದ ನಾಲ್ವರು ನೀರುಪಾಲು

ಹೊಸದಿಗಂತ ವರದಿ ಶಿವಮೊಗ್ಗ :

ಮದುವೆ ಸಮಾರಂಭಕ್ಕೆಂದು ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಬಂದಿದ್ದ ನಾಲ್ವರು ಯುವಕರು ತುಂಗಾ ನದಿಯಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ನಡೆದಿದೆ. ತೀರ್ಥಹಳ್ಳಿ ತಾಲೂಕಿನ ಮಹಿಷಿ ಗ್ರಾಮದ ಬಳಿ ಗುರುವಾರ ಈ ದುರಂತ ಸಂಭವಿಸಿದೆ.

ಕಾರ್ತಿಕ್ (31), ನಕುಲ್ (19), ಪವನ್ (30) ಹಾಗೂ ಚೇತನ್ (19) ನೀರುಪಾಲಾದವರು ಎಂದು ಗುರುತಿಸಲಾಗಿದೆ.

ಇದನ್ನೂ ಓದಿ:

ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಮದುವೆಗೆ ಬಂದಿದ್ದ ಯುವಕರು ಮದುವೆ ಮುಗಿಸಿ ಪ್ರವಾಸಕ್ಕೆ ತೆರಳಿದ್ದರು. ಈ ವೇಳೆ ಮಹಿಷಿ ಬಳಿ ತುಂಗಾ ನದಿಯನ್ನು ವೀಕ್ಷಿಸಲು ತೆರಳಿದ್ದರು. ನದಿ ನೋಡುತ್ತಿದ್ದಾಗ ಓರ್ವ ಯುವಕ ಆಕಸ್ಮಿಕವಾಗಿ ಕಾಲು ಜಾರಿ ನೀರಿಗೆ ಬಿದ್ದಿದ್ದಾನೆ. ಆತನನ್ನು ರಕ್ಷಿಸಲು ಉಳಿದ ಮೂವರು ನದಿಗೆ ಇಳಿದಿದ್ದು, ದುರದೃಷ್ಟವಶಾತ್ ನಾಲ್ವರೂ ನೀರಿನಲ್ಲಿ ಮುಳುಗಿದ್ದಾರೆ.

ಘಟನೆ ತಿಳಿಯುತ್ತಿದ್ದಂತೆ ಮಾಳೂರು ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದು, ನದಿಯಲ್ಲಿ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ.

Must Read