April 2, 2026
Thursday, April 2, 2026
spot_img

ಮೋದಿ ಪ್ರಧಾನಿಯಾಗಿದ್ದಕ್ಕೆ ನನಗೆ ಪದ್ಮಭೂಷಣ ಸಿಕ್ಕಿದೆ ಅಂದಿದ್ದರು ಎಸ್.ಎಲ್. ಭೈರಪ್ಪ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮೋದಿ ಅವರು ಪ್ರಧಾನಿ ಆದ ಕಾರಣವೇ ನನಗೆ ಪದ್ಮಭೂಷಣ ಪ್ರಶಸ್ತಿ ಬಂದಿದೆ. ಇಲ್ಲದೆ ಇದ್ದರೆ ಈ ಬರುತ್ತಿರಲಿಲ್ಲ ಸಾಹಿತಿ ಎಸ್.ಎಲ್. ಭೈರಪ್ಪ ಅವರು ಅಂದು ಹೇಳಿದ್ದರು.

ಮೈಸೂರಿನಲ್ಲಿ 2023ರಲ್ಲಿ ಭೈರಪ್ಪನವರ ಹೆಸರು ಪದ್ಮಭೂಷಣ ಪ್ರಶಸ್ತಿ ಪಡೆದವರ ಪಟ್ಟಿಯಲ್ಲಿ ಪ್ರಕಟವಾದ ನಂತರ ಅಭಿನಂದಿಸಲಾಯಿತು. ಈ ವೇಳೆ ಮಾತನಾಡಿದ್ದ ಅವರು , ಗಣರಾಜ್ಯದ ಉತ್ಸವ ಬಹಳ ಮಹತ್ತರವಾದದ್ದು. ಇಲ್ಲೇ ಕೂತಿದ್ದೇನೆ, ಇಲ್ಲೇ ಬರೆದಿದ್ದಾನೆ. ಮೋದಿ ಅವರು ಪ್ರಧಾನಿ ಆದ ಕಾರಣದಿಂದ ನನಗೆ ಈ ಪ್ರಶಸ್ತಿ ಬಂದಿದೆ. ಇಲ್ಲದೆ ಇದ್ದರೆ ಬರುತ್ತಿರಲಿಲ್ಲ. ಲೇಖಕ ಸತ್ತೇ ಸಾಯುತ್ತಾನೆ. ಆದರೆ ಅವನು ಬರೆದ ಪುಸ್ತಕ ಎಷ್ಟು ದಿನ ಪ್ರಸ್ತುತ ಇರುತ್ತದೋ ಅಲ್ಲಿಯವರೆಗೆ ಲೇಖಕ ಸದಾ ಜೀವಂತ. ನನ್ನ ಕೃತಿಗಳಿಗೆ ಅಂತಹ ಶಕ್ತಿ ಇದ್ದರೆ ನನಗೆ ಸಂತೋಷ ಎಂದಿದ್ದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !