September 10, 2026
Thursday, September 10, 2026
spot_img

CINE | ಥಿಯೇಟ್ರಿಕಲ್ ಹಿಟ್ ಕಂಡ ಕ್ರೂ ಸಿನಿಮಾದ ಪಾರ್ಟ್-2ನಲ್ಲಿ ಬೇಬೋ ನಟಿಸೋದು ಪಕ್ಕಾ!

ಹೊಸದಿಗಂತ ಡಿಜಿಟಲ್ ಡೆಸ್ಕ್:

2024ರಲ್ಲಿ ತೆರೆಕಂಡು ಸೂಪರ್ ಹಿಟ್ ಕಂಡ ಕ್ರೂ ಸಿನಿಮಾದ ಪಾರ್ಟ್-2 ತೆರೆಮರೆಯಲ್ಲಿ ಸಿದ್ಧತೆ ಮಾಡಿಕೊಳ್ಳುತ್ತಿದೆ. ಸದ್ಯ ಕ್ರೂ ಸಿನಿಮಾದ ಪಾರ್ಟ್-2ನಲ್ಲಿ ನಟಿ ಕರೀನಾ ಕಪೂರ್ ನಟಿಸುವುದು ಫಿಕ್ಸ್ ಆಗಿದೆ.

ಈ ಸಿನಿಮಾದಲ್ಲಿ ನಟಿಸೋದಕ್ಕೆ ಸದ್ಯ ಕರೀನಾ ಒಪ್ಪಿಗೆ ಸೂಚಿಸಿದ್ದಾರೆ ಎನ್ನಲಾಗ್ತಿದೆ. ಆದ್ರೆ ಇನ್ನೆರಡು ಪಾತ್ರಗಳಲ್ಲಿ ಕಮಾಲ್ ಮಾಡಿದ್ದ ಟಬು ಹಾಗೂ ಕೃತಿ ಸನೋನ್ ನಟಿಸುವ ಬಗ್ಗೆ ಯಾವುದೇ ಮಾಹಿತಿ ಬಗ್ಗೆ ಚಿತ್ರತಂಡ ಹೊರಹಾಕಿಲ್ಲ.

ಏಕ್ತಾ ಕಪೂರ್, ರೀಯಾ ಕಪೂರ್, ಅನಿಲ್ ಕಪೂರ್ ನಿರ್ಮಾಣದಲ್ಲಿ ಮೂಡಿಬಂದ ಈ ಸಿನಿಮಾ ಒಳ್ಳೆಯ ಲಾಭವನ್ನೇ ಮಾಡಿಕೊಟ್ಟಿದೆ. ಹೀಗಾಗಿ, ಈ ಸಿನಿಮಾದ ಪಾರ್ಟ್-2 ನಿರ್ಮಾಣ ಮಾಡಲು ಈ ತಂಡ ಮತ್ತೆ ಮನಸ್ಸು ಮಾಡಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !