ನಮ್ಮ ದಿನನಿತ್ಯದ ಕಾರ್ಯಗಳಲ್ಲಿ ಉತ್ತಮ ಗಮನ ಹಾಗೂ ಶ್ರದ್ಧೆಯನ್ನು ಕಾಪಾಡುವುದು ಅತ್ಯಂತ ಮುಖ್ಯ. ಯಾವುದೇ ಕಾರ್ಯವನ್ನು ಶ್ರದ್ಧೆಯಿಂದ ಮತ್ತು ಪರಿಣಾಮಕಾರಿಯಾಗಿ ಮುಗಿಸಲು, ಗಮನಶಕ್ತಿ ಮುಖ್ಯ ಪಾತ್ರ ವಹಿಸುತ್ತದೆ. ಆದರೆ ಕೆಲವೊಂದು ದೈನಂದಿನ ಅಭ್ಯಾಸಗಳು ನಮ್ಮ ಗಮನಶಕ್ತಿಯನ್ನು ಕುಂಠಿತಗೊಳಿಸುತ್ತವೆ.
- ನಿರ್ಜಲೀಕರಣ (Dehydration): ದೇಹದಲ್ಲಿ ನೀರಿನ ಕೊರತೆ ಇರುವಾಗ, ನಮ್ಮ ನೆನಪಿನ ಶಕ್ತಿ ಮತ್ತು ಗಮನ ಕಡಿಮೆಯಾಗುತ್ತ ಹೋಗುತ್ತದೆ. ದಿನನಿತ್ಯ ಹೆಚ್ಚು ನೀರು ಕುಡಿಯುವ ಅಭ್ಯಾಸವು ದೇಹದ ಚೈತನ್ಯವನ್ನು ಮತ್ತು ಫೋಕಸ್ ಶಕ್ತಿಯನ್ನು ಹೆಚ್ಚಿಸುತ್ತದೆ.
- ಕಡಿಮೆ ನಿದ್ರೆ: ಪ್ರತಿ ದಿನ ಕನಿಷ್ಠ 7–8 ಗಂಟೆಗಳ ನಿದ್ರೆ ಮಾಡುವುದು ಮುಖ್ಯ. ನಿದ್ರೆ ಕೊರತೆಯಿಂದ ದೇಹದ ಫೋಕಸ್ ಮತ್ತು ಮೆಮೊರಿ ಶಕ್ತಿ ಕುಂದುತ್ತದೆ.
- ಅತಿಯಾದ ಸೋಷಿಯಲ್ ಮೀಡಿಯಾ ಬಳಕೆ: ಸೋಷಿಯಲ್ ಮೀಡಿಯಾದಲ್ಲಿ ಹೆಚ್ಚು ಸಮಯ ಕಳೆಯುವುದು ಮತ್ತು ನೋಟಿಫಿಕೇಷನ್ಗಳಿಂದ ನಿಮ್ಮ ಗಮನ ಫೋನ್ ಕಡೆ ಸೆಳೆಯುತ್ತವೆ. ಇದರ ಪರಿಣಾಮವಾಗಿ ಒತ್ತಡವೂ ಹೆಚ್ಚುತ್ತದೆ.
- ಒಂದೇ ಸಮಯದಲ್ಲಿ ಹಲವಾರು ಕೆಲಸ (Multitasking): ಒಂದೇ ವೇಳೆ ಅನೇಕ ಕೆಲಸ ಮಾಡುವ ಪ್ರಯತ್ನದಿಂದ ನಮ್ಮ ಗಮನ ಹಾಳಾಗುತ್ತದೆ. ಆದ್ದರಿಂದ ಪ್ರತಿ ಸಮಯದಲ್ಲಿ ಒಂದು ಕೆಲಸಕ್ಕೆ ಮಾತ್ರ ಗಮನ ಕೊಡುವುದು ಉತ್ತಮ.
- ಯೋಜನೆಯಿಲ್ಲದ ದಿನಗಳು: ದಿನನಿತ್ಯ ಅಥವಾ ವಾರದ ಕಾರ್ಯಕ್ರಮಕ್ಕೆ ಪ್ಲಾನ್ ಇಲ್ಲದಿದ್ದರೆ, ಸಮಯದ ಬಳಕೆಯಲ್ಲಿ ಅಸಮರ್ಪಕತೆ ಉಂಟಾಗುತ್ತದೆ. ಮುಖ್ಯ ಕಾರ್ಯಗಳಿಗೆ ಪ್ರಾಮುಖ್ಯತೆ ನೀಡುವ ಮೂಲಕ ಟೈಮ್ ಟೇಬಲ್ ರೂಪಿಸಿಕೊಂಡರೆ ಗಮನ ಶಕ್ತಿ ಸುಧಾರಿಸುತ್ತದೆ.
- ಯೋಗ್ಯವಲ್ಲದ ಆಹಾರ ಕ್ರಮ: ಪೋಷಕಾಂಶ ಕಡಿಮೆ ಇರುವ ಆಹಾರ ಅಥವಾ ಅಸಮರ್ಪಕ ಡೈಯಟ್ ಗಮನ ಕಡಿಮೆಯಾಗಲು ಕಾರಣವಾಗಬಹುದು. ಹಣ್ಣು, ತರಕಾರಿ, ಧಾನ್ಯಗಳು ಮತ್ತು ಸಂಪೂರ್ಣ ಪೌಷ್ಟಿಕಾಂಶ ಇರುವ ಆಹಾರ ಸೇವನೆ ಗಮನ ಶಕ್ತಿಯನ್ನು ಹೆಚ್ಚಿಸುತ್ತದೆ.