Thursday, October 23, 2025

ಶಾಂತಿ ಘೋಷಣೆಯ ನಡುವೆ ಗದ್ದಲ: ಇಬ್ಬರು ಇಸ್ರೇಲ್‌ ಸಂಸದರು ಸಂಸತ್ ಭವನದಿಂದ ಔಟ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇಸ್ರೇಲ್ ಮತ್ತು ಗಾಜಾದ ಹಮಾಸ್ ಬಂಡುಕೋರರ ನಡುವಿನ ಸುದೀರ್ಘ ಎರಡು ವರ್ಷಗಳ ಯುದ್ಧಕ್ಕೆ ಕದನ ವಿರಾಮ ಘೋಷಣೆಯಾದ ಬೆನ್ನಲ್ಲೇ ಡೊನಾಲ್ಡ್‌ ಟ್ರಂಪ್‌ ಅವರು ಇಸ್ರೇಲಿ ಸಂಸತ್ತನ್ನು ಉದ್ದೇಶಿಸಿ ಮಾತನಾಡಿದರು.

ಶಾಂತಿಯ ಆಶಯದ ಮಾತುಗಳನ್ನು ಆಡಿದ ಟ್ರಂಪ್‌, “ಹಲವು ವರ್ಷಗಳ ನಿರಂತರ ಯುದ್ಧದ ನಂತರ ಇಂದು ಆಕಾಶವು ಶಾಂತವಾಗಿದೆ. ಬಂದೂಕುಗಳು ಮೌನವಾಗಿವೆ. ಸೈರನ್‌ಗಳು ಶಬ್ಧ ಮಾಡುವುದನ್ನು ನಿಲ್ಲಿಸಿವೆ. ಶಾಂತಿಯಿಂದ ಇರುವ ಪವಿತ್ರ ಭೂಮಿಯ ಮೇಲೆ ಸೂರ್ಯ ಉದಯಿಸುತ್ತಿದ್ದಾನೆ” ಎಂದು ಹೇಳಿದರು.

ಆದರೆ, ಟ್ರಂಪ್‌ ಅವರ ಭಾಷಣದ ನಡುವೆಯೇ ಎಡಪಂಥಿಯ ಸಂಸದರಾದ ಐಮನ್ ಒಡೆಹ್ ಮತ್ತು ಓಫರ್ ಕ್ಯಾಸಿಫ್ ಅವರು ಅಡ್ಡಿಪಡಿಸಿ, ಹೀಬ್ರೂ ಭಾಷೆಯಲ್ಲಿ ಘೋಷಣೆಗಳನ್ನು ಕೂಗಿದರು. ಇವರಿಬ್ಬರು ಪ್ಯಾಲೆಸ್ಟೈನ್ ರಾಷ್ಟ್ರದ ಮಾನ್ಯತೆಗಾಗಿ ಕರೆ ನೀಡುವ ಫಲಕಗಳನ್ನು ಸಹ ಹಿಡಿದಿದ್ದರು.

ತಕ್ಷಣವೇ ಕಾರ್ಯಪ್ರವೃತ್ತರಾದ ಭದ್ರತಾ ಸಿಬ್ಬಂದಿ, ಘೋಷಣೆ ಕೂಗುತ್ತಿದ್ದ ಈ ಇಬ್ಬರು ಸಂಸದರನ್ನು ಬಲವಂತವಾಗಿ ಎಳೆದುಕೊಂಡು ಸಂಸತ್‌ ಭವನದಿಂದ ಹೊರಹಾಕಿದರು. ಕದನ ವಿರಾಮದ ಹಿನ್ನೆಲೆಯಲ್ಲಿ ಟ್ರಂಪ್‌ ಅವರ ಶಾಂತಿ ಸಂದೇಶವು ಪ್ರತಿಭಟನೆಯ ಗದ್ದಲದ ನಡುವೆಯೇ ಮುಂದುವರಿಯಿತು.

error: Content is protected !!