August 22, 2026
Saturday, August 22, 2026
spot_img

FOOD | ಸಖತ್‌ ಟೇಸ್ಟಿ ಮೊಸರು ಕೋಡುಬಳೆ ಇಂದೇ ಟ್ರೈ ಮಾಡಿ ನೋಡಿ

ಸಾಮಾಗ್ರಿಗಳು
ಅಕ್ಕಿ ಹಿಟ್ಟು
ಗಟ್ಟಿ ಮೊಸರು
ಹಸಿ ತೆಂಗಿನಕಾಯಿ ತುರಿ
ಜೀರಿಗೆ
ಹಸಿ ಮೆಣಸಿನಕಾಯಿ
ಕರಿಬೇವು
ಇಂಗು
ಉಪ್ಪು
ಎಣ್ಣೆ

ಮಾಡುವ ವಿಧಾನ
ಒಂದು ಪಾತ್ರೆಯಲ್ಲಿ ಗಟ್ಟಿ ಮೊಸರು, ಹಸಿ ತೆಂಗಿನಕಾಯಿ ತುರಿ, ಜೀರಿಗೆ, ಹಸಿ ಮೆಣಸಿನಕಾಯಿ ಪೇಸ್ಟ್ , ಕರಿಬೇವಿನ ಎಲೆಗಳು, ಮತ್ತು ಉಪ್ಪನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಈ ಮಿಶ್ರಣವನ್ನು ಸಣ್ಣ ಉರಿಯಲ್ಲಿ ಬಿಸಿ ಮಾಡಿ. ಅದು ಸ್ವಲ್ಪ ಬಿಸಿಯಾದ ನಂತರ, ಅಕ್ಕಿ ಹಿಟ್ಟನ್ನು ನಿಧಾನವಾಗಿ ಸೇರಿಸುತ್ತಾ ಗಂಟುಗಳಾಗದಂತೆ ಕಲಸಿ. ಹಿಟ್ಟಿನ ಮಿಶ್ರಣವು ಗಟ್ಟಿಯಾಗುವವರೆಗೂ ಬೇಯಿಸಿ. ನಂತರ ಒಲೆ ಆರಿಸಿ, ಪಾತ್ರೆಗೆ ಮುಚ್ಚಳ ಹಾಕಿ ಹತ್ತು ನಿಮಿಷ ಹಾಗೆಯೇ ಬಿಡಿ.

ಹಿಟ್ಟು ಸ್ವಲ್ಪ ತಣ್ಣಗಾದ ನಂತರ, ಕೈಯಿಂದ ಚೆನ್ನಾಗಿ ನಾದಿ ಮೃದುವಾದ ಹಿಟ್ಟಿನ ಉಂಡೆ ಮಾಡಿ. ಹಿಟ್ಟು ಗಟ್ಟಿಯಾಗಿದ್ದರೆ, ಸ್ವಲ್ಪ ಬಿಸಿನೀರು ಸೇರಿಸಿ ನಾದಿಕೊಳ್ಳಬಹುದು. ಈ ಹಿಟ್ಟಿನಿಂದ ಸಣ್ಣ ಉಂಡೆಗಳನ್ನು ಮಾಡಿ, ನಿಮ್ಮ ಅಂಗೈಯಲ್ಲಿ ಇಟ್ಟು ಉದ್ದವಾಗಿ ದಾರದಂತೆ ಮಾಡಿಕೊಳ್ಳಿ ನಂತರ ಕೊನೆಯಲ್ಲಿ ಎರಡೂ ತುದಿಗಳನ್ನು ಸೇರಿಸಿ ಕೋಡುಬಳೆಯ ಆಕಾರಕ್ಕೆ ತಂದುಕೊಳ್ಳಿ.ಬಾಣಲೆಯಲ್ಲಿ ಎಣ್ಣೆ ಕಾಯಿಸಿ, ಕೋಡುಬಳೆಗಳನ್ನು ಎರಡೂ ಬದಿ ಕಂದು ಬಣ್ಣ ಬರುವವರೆಗೂ ಕರಿಯಿರಿ. 

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !