ಹೊಸದಿಗಂತ ಡಿಜಿಟಲ್ ಡೆಸ್ಕ್:
ದಕ್ಷಿಣ ಆಫ್ರಿಕಾ ವಿರುದ್ಧ ಎರಡನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಬ್ಯಾಟಿಂಗ್ ಮಂಕಾಗಿದ್ದು, ಮೊದಲ ಇನ್ನಿಂಗ್ಸ್ನಲ್ಲಿ ಕೇವಲ 202 ರನ್ಗಳಿಗೆ ತನ್ನ ಎಲ್ಲ ವಿಕೆಟ್ ಕಳೆದುಕೊಂಡಿದೆ.
ವಾಂಡರರ್ಸ್ ಮೈದಾನದಲ್ಲಿ ಆರಂಭಗೊಂಡಿರುವ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆರಂಭಿಸಿದ ಟೀಂ ಇಂಡಿಯಾ ಮಯಾಂಕ್ ಅಗರವಾಲ್ (26) ವಿಕೆಟ್ ಕಳೆದುಕೊಂಡಿತು. ಇದರ ಬೆನ್ನಲ್ಲೇ ಬಂದ ಪೂಜಾರಾ (3), ರಹಾನೆ(0) ಮತ್ತೊಮ್ಮೆ ನಿರಾಸೆ ಮೂಡಿಸಿದರು.
ಟೆಸ್ಟ್ ನಾಯಕತ್ವ ವಹಿಸಿಕೊಂಡ ರಾಹುಲ್ ಮೊದಲ ಪಂದ್ಯದಲ್ಲೇ ಅರ್ಧಶತಕ ಸಿಡಿಸಿದರು.
ಹನುಮ ವಿಹಾರಿ 20 ರನ್, ರಿಷಭ್ ಪಂತ್ 17 ರನ್ ಗಳಿಸಿ ಪೆವಿಲಿಯನ್ ಸೇರಿಕೊಂಡರು. ಆರ್.ಅಶ್ವಿನ್ ತಾವು ಎದುರಿಸಿದ 50 ಎಸೆತಗಳಲ್ಲಿ 46 ರನ್ಗಳಿಕೆ ಮಾಡಿ ತಂಡದ ಮೊತ್ತ ಹಿಗ್ಗಿಸುವಲ್ಲಿ ಯಶಸ್ವಿಯಾದರು.
ಶಾರ್ದೂಲ್ ಠಾಕೂರ್ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರು.ಬೌಲರ್ಗಳಾದ ಮೊಹಮ್ಮದ್ ಶಮಿ 9 ರನ್, ಸಿರಾಜ್ 1 ರನ್ ಹಾಗೂ ಉಪನಾಯಕ ಜಸ್ಪ್ರೀತ್ ಬುಮ್ರಾ ಸಿಕ್ಸರ್ ಸಮೇತ 14 ರನ್ಗಳಿಸಿ ಅಜೇಯರಾಗುಳಿದರು.
63.1 ಓವರ್ಗಳಲ್ಲಿ ತನ್ನೆಲ್ಲ ವಿಕೆಟ್ ಕಳೆದುಕೊಂಡು 202 ರನ್ಗಳಿಕೆ ಮಾಡಿತು.
ದಕ್ಷಿಣ ಆಫ್ರಿಕಾ ಪರ ಬೌಲಿಂಗ್ನಲ್ಲಿ ಮಿಂಚಿದ ಮಾರ್ಕೋ ಜಾನ್ಸೆನ್ 4 ವಿಕೆಟ್, ರಬಾಡಾ, ಒಲಿವಿರ್ ತಲಾ 3 ವಿಕೆಟ್ ಪಡೆದುಕೊಂಡರು.