ದಿನಭವಿಷ್ಯ: ಇಂದು ಬಹಳ ಒತ್ತಡದ ದಿನ, ಆದರೆ ಉತ್ತಮ ಕೆಲಸವೂ ನಿಮ್ಮಿಂದ ಹೊರಹೊಮ್ಮಲಿದೆ!

ಮಂಗಳವಾರ, 4 ಜನವರಿ 2022

ಮೇಷ
ಕೆಲವೊಮ್ಮೆ ಒತ್ತಡಗಳೂ ಒಳ್ಳೆಯದೆ. ಅದರಿಂದಾಗಿ ಉತ್ತಮ ಕೆಲಸಗಳು ಹೊರಹೊಮ್ಮುತ್ತವೆ. ಇದು ಇಂದು ನಿಮ್ಮ ಪಾಲಿಗೆ ಅನ್ವಯ.

ವೃಷಭ
ಸಾಮಾಜಿಕ ಕಾರ್ಯ ಗಳು ಹೆಚ್ಚು. ಕೆಲವು ಅಡ್ಡಿಗಳು ಒದಗಿದರೂ ಅದರಿಂದ ನಿಮ್ಮ ಕಾರ್ಯಕ್ಕೆ ಬಾಧೆಯಾಗದು. ಕೌಟುಂಬಿಕ ಅಸಹನೆ.

ಮಿಥುನ
ಭಾವುಕರಾಗಿ ಇಂದು ವರ್ತಿಸುವಿರಿ. ಇದರಿಂದ ವಿವೇಕ ನಶಿಸಬಹುದು. ಪ್ರಮುಖ ವಿಷಯದಲ್ಲಿ ತೆಗೆದುಕೊಳ್ಳುವ ಭಾವನಾತ್ಮಕ ನಿರ್ಧಾರ ಒಳಿತು ತರಲಾರದು.

ಕಟಕ
ನಿಮ್ಮ ಕೋರಿಕೆ ಈಡೇರಿಸಿಕೊಳ್ಳಲು ಇಂದು ಹಣವನ್ನು ಸಾಕಷ್ಟು ವ್ಯಯಿಸ ಬೇಕಾಗುತ್ತದೆ. ಆದರೂ ಅಂತಿಮವಾಗಿ ತೃಪ್ತಿ ಹೊಂದುವಿರಿ.

ಸಿಂಹ
ನಿಮ್ಮ ಮನೋಸ್ಥಿತಿ ಇಂದು ಪದೇಪದೇ ಬದಲಾಗಬಹುದು. ಸಣ್ಣ ವಿಷಯಗಳೂ ಭಾವೋದ್ವಿಗ್ನತೆ ಸೃಷ್ಟಿಸಬಹುದು. ಸಂಯಮ ಕಾದುಕೊಳ್ಳಿ.

ಕನ್ಯಾ
ಇತರರ ಮನಸ್ಸನ್ನು ಅರಿತು ವ್ಯವಹರಿಸುವಲ್ಲಿ ನೀವು ನಿಷ್ಣಾತರು. ಹಾಗಾಗಿ ಎಲ್ಲರೂ ನಿಮ್ಮಲ್ಲಿ ವಿಶ್ವಾಸ ತೋರುತ್ತಾರೆ. ಇತರರ ಸಮಸ್ಯೆ ಪರಿಹರಿಸುವಿರಿ.

ತುಲಾ
ಕಣ್ಣು ಕಿವಿ ತೆರೆದಿಡಿ. ಸುತ್ತಲಿನ ಬೆಳವಣಿಗೆಯನ್ನು ಸರಿಯಾಗಿ ಗಮನಿಸಿ. ಅವು ನಿಮ್ಮ ಮೇಲೂ ಪರಿಣಾಮ ಬೀರುವ ಸಾಧ್ಯತೆಗಳಿವೆ.

ವೃಶ್ಚಿಕ
ನಿಮ್ಮ ಕೆಲಸದ ಕುರಿತಂತೆ ಇತರರು ಟೀಕೆ ಮಾಡಬಹುದು. ಅದರಿಂದ ಖಿನ್ನರಾಗದಿರಿ.  ಎಲ್ಲರನ್ನು ಮೆಚ್ಚಿಸುವುದು ಸಾಧ್ಯವಿಲ್ಲ ಎಂಬುದು ಅರಿಯಿರಿ.

ಧನು
ದಿನವಿಡೀ ಕಳೆಗುಂದಿದ ಮನಸ್ಥಿತಿ. ಉಲ್ಲಾಸ ಪಡುವ ವಿಷಯಗಳಿದ್ದರೂ ಮನಸ್ಸೇಕೋ ಅದಕ್ಕೆ ಸರಿಹೊಂದದು. ಆರ್ಥಿಕ ಒತ್ತಡ.

ಮಕರ
ಸಂಬಂಧಗಳ ಮೇಲೆ ಪರಿಣಾಮ ಬೀರಬಲ್ಲ ಬೆಳವಣಿಗೆ ಸಂಭವಿಸೀತು. ಹೊಸ ವಿಚಾರ ತಿಳಿದು ಬರ ಬಹುದು. ದುಡುಕಿನಿಂದ ವರ್ತಿಸದಿರಿ.

ಕುಂಭ
ಇಂದು ವಾದವಿವಾದ ಗಳಿಂದ ದೂರವಿರಿ. ಏಕೆಂದರೆ ಅದರಲ್ಲಿ ನೀವು ಗೆಲ್ಲಲಾರಿರಿ. ಸಂಘರ್ಷದಿಂದ ದೂರ ಇರುವುದರಲ್ಲೇ ನಿಮ್ಮ ಹಿತವಡಗಿದೆ.

ಮೀನ
ಮುಂಜಾನೆಯ ಅವ ಸಮಸ್ಯೆಗಳ ಪರಿಹಾರದಲ್ಲೇ ತೊಡಗುವಿರಿ. ಅಪರಾಹ್ನ ಎಲ್ಲವೂ ನಿರಾಳವಾಗಿ ಸಮಾಧಾನ.

- Advertisement - Skool Shine Skool Shine

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!