ಎರಡನೇ ಟೆಸ್ಟ್​ ಪಂದ್ಯ: ಟೀಮ್ ಇಂಡಿಯಾ 202 ರನ್​ಗಳಿಗೆ ಸರ್ವಪತನ

ಹೊಸದಿಗಂತ ಡಿಜಿಟಲ್ ಡೆಸ್ಕ್:

ದಕ್ಷಿಣ ಆಫ್ರಿಕಾ ವಿರುದ್ಧ ಎರಡನೇ ಟೆಸ್ಟ್​ ಪಂದ್ಯದಲ್ಲಿ ಟೀಂ ಇಂಡಿಯಾ ಬ್ಯಾಟಿಂಗ್​ ಮಂಕಾಗಿದ್ದು, ಮೊದಲ ಇನ್ನಿಂಗ್ಸ್​​ನಲ್ಲಿ ಕೇವಲ 202 ರನ್​ಗಳಿಗೆ ತನ್ನ ಎಲ್ಲ ವಿಕೆಟ್ ಕಳೆದುಕೊಂಡಿದೆ.
ವಾಂಡರರ್ಸ್​​​ ಮೈದಾನದಲ್ಲಿ ಆರಂಭಗೊಂಡಿರುವ ಪಂದ್ಯದಲ್ಲಿ ಟಾಸ್​ ಗೆದ್ದು ಮೊದಲು ಬ್ಯಾಟಿಂಗ್​​ ಆರಂಭಿಸಿದ ಟೀಂ ಇಂಡಿಯಾ ಮಯಾಂಕ್​ ಅಗರವಾಲ್ ​​(26) ವಿಕೆಟ್ ಕಳೆದುಕೊಂಡಿತು. ಇದರ ಬೆನ್ನಲ್ಲೇ ಬಂದ ಪೂಜಾರಾ (3), ರಹಾನೆ(0) ಮತ್ತೊಮ್ಮೆ ನಿರಾಸೆ ಮೂಡಿಸಿದರು.
ಟೆಸ್ಟ್​ ನಾಯಕತ್ವ ವಹಿಸಿಕೊಂಡ ರಾಹುಲ್​ ಮೊದಲ ಪಂದ್ಯದಲ್ಲೇ ಅರ್ಧಶತಕ ಸಿಡಿಸಿದರು.
ಹನುಮ ವಿಹಾರಿ 20 ರನ್​, ರಿಷಭ್ ಪಂತ್ ​17 ರನ್ ​​ಗಳಿಸಿ ಪೆವಿಲಿಯನ್​​​ ಸೇರಿಕೊಂಡರು. ಆರ್​.ಅಶ್ವಿನ್​​ ತಾವು ಎದುರಿಸಿದ 50 ಎಸೆತಗಳಲ್ಲಿ 46 ರನ್​ಗಳಿಕೆ ಮಾಡಿ ತಂಡದ ಮೊತ್ತ ಹಿಗ್ಗಿಸುವಲ್ಲಿ ಯಶಸ್ವಿಯಾದರು.
​​​ ಶಾರ್ದೂಲ್ ಠಾಕೂರ್ ​ಶೂನ್ಯಕ್ಕೆ ವಿಕೆಟ್​ ಒಪ್ಪಿಸಿದರು.ಬೌಲರ್​ಗಳಾದ ಮೊಹಮ್ಮದ್ ಶಮಿ 9 ರನ್, ಸಿರಾಜ್​ 1 ರನ್​ ಹಾಗೂ ಉಪನಾಯಕ ಜಸ್ಪ್ರೀತ್ ಬುಮ್ರಾ ಸಿಕ್ಸರ್​ ಸಮೇತ 14 ರನ್​ಗಳಿಸಿ ಅಜೇಯರಾಗುಳಿದರು.
63.1 ಓವರ್​​ಗಳಲ್ಲಿ ತನ್ನೆಲ್ಲ ವಿಕೆಟ್​ ಕಳೆದುಕೊಂಡು 202 ರನ್​ಗಳಿಕೆ ಮಾಡಿತು.
ದಕ್ಷಿಣ ಆಫ್ರಿಕಾ ಪರ ಬೌಲಿಂಗ್​ನಲ್ಲಿ ಮಿಂಚಿದ ಮಾರ್ಕೋ ಜಾನ್ಸೆನ್​ 4 ವಿಕೆಟ್​, ರಬಾಡಾ, ಒಲಿವಿರ್ ತಲಾ​ 3 ವಿಕೆಟ್ ಪಡೆದುಕೊಂಡರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!