ಹೊಸದಿಗಂತ ವರದಿ,ಮದ್ದೂರು :
ಪಟ್ಟಣದ ತಾಲೂಕು ಕಚೇರಿ ಕಟ್ಟಡದ ಮೇಲಿಂದ ಜಿಗಿದು ಡಿ ಗ್ರೂಪ್ ನೌಕರನೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಭಾನುವಾರ ಮಧ್ಯಾಹ್ನ ಜರುಗಿದೆ.
ಮಂಡ್ಯ ತಾಲೂಕು ಕಚೇರಿಯಲ್ಲಿ ರೆಕಾರ್ಡ್ ರೂಂನಲ್ಲಿ ದ್ತರ್‌ಬಂದ್ ಆಗಿ ಕೆಲಸ ಮಾಡುತ್ತಿದ್ದ ವೆಂಕಟೇಶ್ (48) ಆತ್ಮಹತ್ಯೆಗೆ ಶರಣಾದ ನೌಕರ.
ಮದ್ದೂರು ತಾಲೂಕು ಕಚೇರಿಗೆ ಮಧ್ಯಾಹ್ನ 2.30ರ ಸುಮಾರಿಗೆ ಆಗಮಿಸಿದ ವೆಂಕಟೇಶ್, ಹಗಲು ವೇಳೆ ಕಚೇರಿ ಕಾವಲುಗಾರಳಾಗಿದ್ದ ಭಾಗ್ಯಮ್ಮ ಎಂಬುವಳ ಕಣ್ಣು ತಪ್ಪಿಸಿ ಕಚೇರಿಯ 2ನೇ ಮಹಡಿಗೆ ಬಂದಿದ್ದಾನೆ. ನಂತರ ರೆಕಾರ್ಡ್ ರೂಂನಕೊಠಡಿ ಹಿಂಭಾಗದಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಘಟನೆಯಿಂದ ತೀವ್ರವಾಗಿ ಗಾಯಗೊಂಡ ವೆಂಕಟೇಶ್‌ನನ್ನು ಕಚೇರಿ ನೌಕರರು ಮದ್ದೂರು ಸಾರ್ವಜನಿಕ ಆಸ್ಪತ್ರೆಗೆ ದಾಖಲು ಮಾಡಿದರಾದರೂ, ಚಿಕಿತ್ಸೆ ಲಕಾರಿಯಾಗದೆ ಕೊನೆಯುಸಿರೆದ್ದಿದ್ದಾನೆ.
ಈ ಹಿಂದೆ ಮದ್ದೂರು ತಾಲೂಕು ಕಚೇರಿ ಭೂದಾಖಲೆ ವಿಭಾಗದಲ್ಲಿ ಆರ್‌ಟಿಸಿ ಮತ್ತು ಎಂ.ಆರ್ ದಾಖಲೆಗಳನ್ನು ಭದ್ರಪಡಿಸುವ ದ್ತರ್ ಬಂದ್ ನೌಕರನಾಗಿ ಕೆಲಸ ಮಾಡುತ್ತಿದ್ದ. ಕಳೆದ 2019ರಲ್ಲಿ ಕಂದಾಯ ಸಚಿವ ಆರ್. ಅಶೋಕ್ ತಾಲೂಕು ಕಚೇರಿಗೆ ಭೇಟಿ ನೀಡಿದ ವೇಳೆ ಆರ್‌ಟಿಸಿ ನೀಡಲು ವೆಂಕಟೇಶ್ ಲಂಚ ಕೇಳುತ್ತಿದ್ದಾನೆ ಎಂದು ರೈತರು ವೆಂಕಟೇಶ್ ವಿರುದ್ಧ ಸಚಿವರಿಗೆ ಲಿಖಿತ ದೂರು ನೀಡಿದ್ದ ಹಿನ್ನೆಲೆಯಲ್ಲಿ ಸಚಿವ ಅಶೋಕ್ ಈತನನ್ನು ಅಮಾನತ್ತು ಮಾಡಿದ್ದರು.
ಐದಾರು ತಿಂಗಳ ನಂತರ ವೆಂಕಟೇಶ್ ಅಮಾನತ್ತು ವಾಪಸ್ಸು ಪಡೆದ ಜಿಲ್ಲಾಧಿಕಾರಿಗಳು, ಮಂಡ್ಯ ತಾಲೂಕು ಕಚೇರಿಗೆ ವರ್ಗಾವಣೆ ಮಾಡಿದ್ದರು. ವೆಂಕಟೇಶ್ ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದುಬಂದಿಲ್ಲಘಿ. ಶವವನ್ನು ಮದ್ದೂರು ಆಸ್ಪತ್ರೆಯ ಶವಾಗಾರದಲ್ಲಿರಸಲಾಗಿದ್ದುಘಿ, ಘಟನೆ ಸಂಬಂಧ ಮದ್ದೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.