ಪಟ್ನಾ ಪೈರೇಟ್ಸ್‌ ಎದುರು ಸೋತರೂ ಅಗ್ರಸ್ಥಾನದಲ್ಲೇ ಮುಂದುವರೆದ ಬೆಂಗಳೂರು ಬುಲ್ಸ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಪ್ರೋ ಕಬಡ್ಡಿ ಲೀಗ್‌ ನಲ್ಲಿ ಪಟ್ನಾ ಪೈರೇಟ್ಸ್‌ ವಿರುದ್ಧ ಬೆಂಗಳೂರು ಬುಲ್ಸ್‌ ಸೋಲನುಭವಿಸಿದೆ.
ಲೀಗ್‌ ನ 59ನೇ ಪಂದ್ಯ ಇದಾಗಿದ್ದು, ಆಡಿರುವ 11 ಪಂದ್ಯಗಳಲ್ಲಿ 7 ಪಂದ್ಯಗಳನ್ನು ಬೆಂಗಳೂರು ಗೆಲ್ಲುವ ಮೂಲಕ ಇನ್ನೂ ಅಗ್ರಸ್ಥಾನದಲ್ಲಿಯೇ ಇದೆ. ಎರಡನೇ ಸ್ಥಾನದಲ್ಲಿ ಪಟ್ನಾ ಪೈರೇಟ್ಸ್‌ ಇದ್ದು, ಮೂರನೇ ಸ್ಥಾನದಲ್ಲಿ ದಬಾಂಗ್‌ ಡೆಲ್ಲಿ ಇದೆ.
ಭಾನುವಾರ ನಡೆದ ಬೆಂಗಳೂರು ಹಾಗೂ ಪಟ್ನಾ ರೈಡರ್‌ ಗಳ ಹಣಾಹಣಿಯಲ್ಲಿ ಪಟ್ನಾ ೩೮-೩೧ ಅಂಕಗಳ ಅಂತರದಲ್ಲಿ ಭರ್ಜರಿ ಜಯ ಗಳಿಸಿತು. ಪೈರೇಟ್ಸ್ ನ ಡಿಫೆಂಡರ್ ಗಳಾದ ಸುನಿಲ್ ಮತ್ತು ಮೊಹಮ್ಮದ್ರೇಜಾ ಶಾದ್ಲೌಯಿ ಅವರು ಪವನ್ ಸೆಹ್ರಾವತ್‌ ತಂಡದ ಗೆಲುವಿಗೆ ಕಾರಣರಾದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!