”ಮುಂದಿನ ವರ್ಷ ನನ್ನ ಬರ್ಥಡೇಗೆ ಏನು ಗಿಫ್ಟ್ ಕೊಡ್ತೀಯಾ ಅಪ್ಪಾ?”

ಅಪ್ಪ ನನಗೆ ಮುಂದಿನ ವರ್ಷ ಬರ್ಥಡೇಗೆ ಏನ್ ಗಿಫ್ಟ್ ಕೊಡ್ತ್ಯ? ಕಣ್ಣರಳಿಸಿ ಕೇಳಿದ ಮಗ. ಈ ವರ್ಷದ ನಿನ್ನ ಹುಟ್ಟು ಹಬ್ಬ ಮುಗಿದು ಬರೀ ಎರಡು ತಿಂಗಳಾಗಿದೆ, ಈಗಲೇ ನಿನಗೆ ಮುಂದಿನ ವರ್ಷದ ಚಿಂತೆ, ಅದಕ್ಕಿನ್ನು ಸಮಯ ಇದೆ ಎಂದು ಅಪ್ಪ ಹೇಳಿದ.

ಅವರ ಮನೆಯಲ್ಲಿ ಪ್ರತಿ ವರ್ಷವೂ ಒಂದೊಂದು ಗಿಫ್ಟ್ ನೀಡಲಾಗುತ್ತಿತ್ತು. ಎಲ್ಲವೂ ಸಿಕ್ಕಾಪಟ್ಟೆ ಸ್ಪೆಷಲ್ ಅದಕ್ಕೆ ಮಗ ತುಂಬಾನೇ ಎಕ್ಸೈಟ್ ಆಗಿದ್ದ. ಹೀಗೆ ಒಂದು ದಿನ ಮಗ ಶಾಲೆಯಲ್ಲಿ ತಲೆತಿರುಗಿ ಬಿದ್ದ ಎಂದು ಶಾಲೆಯಿಂದ ಫೋನ್ ಬಂತು. ತಕ್ಷಣ ಆಸ್ಪತ್ರೆಗೆ ಅವನನ್ನು ಸೇರಿಸಿದ್ರು.

ಮಗನಿಗೆ ಹೃದಯ ಸಂಬಂಧಿ ಕಾಯಿಲೆ ಇತ್ತು. ಆತನಿಗೆ ಹಾರ್ಟ್ ಟ್ರಾನ್ಸ್‌ಪ್ಲಾಂಟ್ ಆಗಬೇಕಿತ್ತು. ಇಲ್ಲಾ ಎಂದರೆ ಆತ ಬದುಕುಳಿಯುವ ಸಾಧ್ಯತೆ ಇರಲಿಲ್ಲ. ತಲೆ ಮೇಲೆ ಕೈ ಹೊತ್ತು ತಂದೆ ಅಳುತ್ತಾ ಕೂತಿದ್ದ.

ಅಷ್ಟೆ ಇದಾದ ವರ್ಷದ ನಂತರ ಮಗನಿಗೆ ತನ್ನ ಗಿಫ್ಟ್ ಸಿಕ್ಕಿತ್ತು. ಅಪ್ಪ ಒಂದು ಪತ್ರ ಬರೆದಿದ್ದ. ಈ ಪತ್ರವನ್ನು ನೀನು ಓದುತ್ತಿದ್ದೀಯ ಎಂದಾದರೆ ನೀನು ಆರೋಗ್ಯವಾಗಿದ್ದೀಯ ಎಂದೇ ಅರ್ಥ. ಹ್ಯಾಪಿ ಬರ್ಥಡೇ ಮಗನೆ, ಗಿಫ್ಟ್ ಏನು ಕೊಡಿಸುತ್ತೀಯ ಎಂದು ಕೇಳುತ್ತಿದ್ದೀಯಲ್ಲ, ನನ್ನ ಹೃದಯವನ್ನೇ ನಿನಗೆ ನೀಡಿದ್ದೇನೆ ಎಂದು ಬರೆದಿತ್ತು!

ತಂದೆ-ತಾಯಿಯ ಕಷ್ಟಗಳನ್ನು ಕಡೆಗಾಣಿಸಬೇಡಿ, ನಿಮಗಾಗಿ ಅವರು ಯಾವ ಕಷ್ಟವನ್ನೂ ಅನುಭವಿಸಲು ತಯಾರಿರುತ್ತಾರೆ. ಇದ್ದಾಗ ಅವರನ್ನು ನೋಯಿಸಿ, ಇಲ್ಲದಾಗ ಕಣ್ಣೀರಿಟ್ಟರೆ ಏನು ಲಾಭ? ಇರುವವರನ್ನು ಚೆನ್ನಾಗಿ ನೋಡಿಕೊಳ್ಳಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!