ಹೊಸದಿಗಂತ ಡಿಜಿಟಲ್ ಡೆಸ್ಕ್:
ಉತ್ತರಪ್ರದೇಶದ ಬುಡೌನ್‌ನ ಇಬ್ರಾಹಿಂ ಗದಿ ಗ್ರಾಮದಲ್ಲಿ ಮನೆಯ ಗೋಡೆ ಕುಸಿದು ಇಬ್ಬರು ಮೃತಪಟ್ಟಿದ್ದು, ಮೂವರು ಗಾಯಗೊಂಡಿದ್ದಾರೆ.
ನರೇಶ್ ಪಾಲ್, ರಾಮ್ ಸಿಂಗ್ ಮೃತರು. ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಊರಿನಲ್ಲಿ ವಿಪರೀತ ಚಳಿ ಇದ್ದು, ಎಲ್ಲರೂ ಮನೆಯ ಮುಂಭಾಗ ಚಳಿ ಕಾಯಿಸಿಕೊಂಡು ಕುಳಿತಿದ್ದರು. ಈ ವೇಳೆ ಶಿಥಿಲಗೊಂಡ ಮನೆ ಕುಸಿದಿದ್ದು, ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.