2022ರ ಐಪಿಎಲ್‌ ನ ಅತ್ಯಂತ ದುಬಾರಿ ಆಟಗಾರ ಕೆ.ಎಲ್‌ ರಾಹುಲ್!‌ ಇವರ ಸಂಭಾವನೆ ಎಷ್ಟು ಗೊತ್ತಾ?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

2022ರ ಐಪಿಎಲ್‌ ನಲ್ಲಿ ಕನ್ನಡಿಗ ಕೆ.ಎ. ರಾಹುಲ್‌ ಅತ್ಯಂತ ದುಬಾರಿ ಆಟಗಾರರಾಗಿದ್ದಾರೆ. ಫ್ರಾಂಚೈಸಿ ಲಖನೌ ತಂಡದಿಂದ ರಾಹುಲ್‌ ತಂಡದ ನಾಯಕತ್ವದ ಜತೆಗೆ ಬರೋಬ್ಬರಿ 17 ಕೋಟಿ ರೂ. ಪಡೆಯಲಿದ್ದಾರೆ.
ಈ ಹಿಂದೆ 2018ರಲ್ಲಿ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ಕೂಡ ವಿರಾಟ್‌ ಕೋಹ್ಲಿಯನ್ನು ಉಳಿಸಿಕೊಳ್ಳಲು 17 ಕೋಟಿ ರೂ. ಸಂಭಾವನೆ ನೀಡಿತ್ತು. ನಂತರ 5 ಆವೃತ್ತಿಗಳಲ್ಲೂ ಕೋಹ್ಲಿ 17 ಕೋಟಿ ರೂ. ಪಡೆದಿದ್ದರು.
ಸದ್ಯ 2022ರಲ್ಲಿ ಲಖನೌ ತಂಡ ಕೆ.ಎಲ್ ರಾಹುಲ್‌, ಆಸ್ಟ್ರೇಲಿಯಾದ ಆಲ್‌ ರೌಂಡರ್‌ ರ್ಕಸ್‌ ಸ್ಟೋಯ್ನಿಸ್‌ ಮತ್ತು ಸ್ಪಿನ್ನರ್‌ ರವಿ ಬಿಷ್ಣೋಯ್‌ ರನ್ನು ಉಳಿಸಿಕೊಂಡಿದೆ. ಇವರಲ್ಲಿ ಇಬ್ಬರಿಗೆ 9.2 ಕೋಟಿ ರೂ. ಹಾಗೂ 4 ಕೋಟಿ ರೂ. ಕ್ರಮವಾಗಿ ನೀಡಲಾಗಿದೆ.
ಇನ್ನು ಅಹ್ಮದಾಬಾದ್‌ ನ ಹೊಸ ಫ್ರಾಂಚೈಸಿಯ ಆಟಗಾರರು ಹಾರ್ದಿಕ್‌ ಪಾಂಡ್ಯ ಗೆ 15 ಕೋಟಿ ರೂ, ಅಫ್ಘನ್‌ ನ ಸ್ಪಿನ್ನರ್‌ ರಶೀದ್‌ ಖಾನ್‌ ಗೆ 15 ಕೋಟಿ ರೂ. ಶುಬ್ಮನ್‌ ಗಿಲ್‌ ಗೆ 8 ಕೋಟಿ ರೂ. ಕೊಡಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!