ಹೊಸದಿಗಂತ ಡಿಜಿಟಲ್ ಡೆಸ್ಕ್:
ಇ ಕಾಮರ್ಸ್ ನ ಬಹುದೊಡ್ಡ ಮಾರುಕಟ್ಟೆಯಾಗಿರುವ ಅಮೆಜಾನ್ ಮತ್ತೆ ಭಾರತೀಯರ ಕೆಂಗಣ್ಣಿಗೆ ಗುರಿಯಾಗುತ್ತಿದೆ. ತನ್ನ ಆನ್ ಲೈನ್ ಶಾಪಿಂಗ್ ವೆಬ್ ನಲ್ಲಿ ಭಾರತದ ತ್ರಿವರ್ಣ ಧ್ವಜಕ್ಕೆ ಅವಮಾನ ಮಾಡುತ್ತಿದೆ ಎಂದು ವ್ಯಾಪಕ ಆಕ್ರೋಶ ಕೇಳಿಬರುತ್ತಿದೆ.
ಅಮೆಜಾನ್ ಭಾರತ ಧ್ವಜಕ್ಕೆ ಅವಮಾನಿಸುವಂತಹ ರೀತಿಯ ಬಟ್ಟೆ, ಮಾಸ್ಕ್ ಗಳನ್ನು ನೋಡಿ ನೆಟ್ಟಿಗರು ಕಿಡಿಕಾರುತ್ತಿದ್ದಾರೆ.
ಅಮೆಜಾನ್ ಅನ್ನು ಬಹಿಷ್ಕರಿಸುವಂತೆ ಹೇಳಿ ಟ್ವಿಟರ್ ನಲ್ಲಿ #Amazon_Insults_National_Flag ಹ್ಯಾಷ್ ಟ್ಯಾಗ್ ಅಡಿಯಲ್ಲಿ ನೆಟ್ಟಿಗರು ಪೋಸ್ಟ್ ಹಾಕುತ್ತಿದ್ದಾರೆ.
ತ್ರಿವರ್ಣ ಧ್ವಜದ ಮುದ್ರೆಗಳುಳ್ಳ ಟೀಶರ್ಟ್, ಮಗ್, ಮಾಸ್ಕ್, ಚಾಕೊಲೇಟ್ ಕವರ್ ಗಳು ಅಮೆಜಾನ್ ನಲ್ಲಿ ಮಾರಾಟಕ್ಕಿದೆ. ಇದು ಭಾರತ ಧ್ವಜಕ್ಕೆ ಮಾಡಿದ ಅವಮಾನ ಎಂದು ಜನರು ಹರಿಹಾಯ್ದಿದ್ದಾರೆ.
ಅಮೆಜಾನ್ ಈ ರೀತಿ ಭಾರತೀಯರ ಭಾವನೆಗೆ ಧಕ್ಕೆ ತರುವಂತಹ ಕೆಲಸ ಮಾಡುತ್ತಿರುವುದು ಇದೇ ಮೊದಲೇನಲ್ಲ 2017 ಹಾಗೂ 2019ರಲ್ಲಿ ಹಿಂದು ದೇವತೆಗಳ ಚಿತ್ರ ಮುದ್ರಿಸಿರುವ ಚಪ್ಪಲಿ, ಡೋರ್ ಮಾಟ್, ಟಾಯ್ಲೆಟ್ ಸೀಟ್ ಕವರ್ ಗಳನ್ನು ಮಾರಾಟಕ್ಕೆ ಇಟ್ಟಿತು. ಆಗಲೂ ಜನರು ಅಮೆಜಾನ್ ವಿರುದ್ಧ ಬಹಿಷ್ಕಾರದ ಅಭಿಯಾನ ನಡೆಸಿದ್ದರು.
⭕The Flag Code of India clearly states that the Flag shall not be used for commercial purposes (in violation of The Emblems and Names Act,1950)
👉 Amazon has violated the
act !
👉 Strict actions must be taken ! #Amazon_Insults_National_Flag pic.twitter.com/l11TQD764p— Nilesh Joshi (@NileshJoshi07) January 24, 2022
#Amazon_Insults_National_Flag
Pathetic Indian PeoplePicture 1 is Proud and Picture 2 is Insult ? pic.twitter.com/AfuzhldbIl
— SHIVA (@G00Z1o) January 24, 2022
#Amazon_Insults_National_Flag
Its not for the first time‼️
⚠️Strict action should be taken against @amazonIN ❗ pic.twitter.com/AZDjiXqjr0— Snehal Patil (@SnehalPatil4SP) January 24, 2022