ಹೊಸ ದಿಗಂತ ಡಿಜಿಟಲ್ ಡೆಸ್ಕ್
ರಾಜ್ಯದಲ್ಲಿ ಇಂದು ಹೊಸದಾಗಿ 38,083 ಮಂದಿಗೆ ಕೋವಿಡ್ ಪಾಸಿಟಿವ್ ದೃಢಪಟ್ಟಿದೆ.
ಈ ಬಗ್ಗೆ ಟ್ವಿಟ್ಟರ್ ನಲ್ಲಿ ಮಾಹಿತಿ ಹಂಚಿಕೊಂಡಿರುವ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ , ಕಳೆದ 24 ಗಂಟೆಯಲ್ಲಿ 1,86,313 ಮಂದಿಗೆ ಕೋವಿಡ್ ಪರೀಕ್ಷೆ ಮಾಡಲಾಗಿದೆ. ಇವರಲ್ಲಿ ಬೆಂಗಳೂರಿನಲ್ಲಿ 17,717 ಸೇರಿದಂತೆ ರಾಜ್ಯಾದ್ಯಂತ 38.083 ಜನರಿಗೆ ಕೊರೋನಾ ಪಾಸಿಟಿವ್ ದೃಢಪಟ್ಟಿರುವುದಾಗಿ ತಿಳಿಸಿದ್ದಾರೆ.
ರಾಜ್ಯದಲ್ಲಿ ಪಾಸಿಟಿವಿಟಿ ದರ ಶೇ.20.44ಕ್ಕೆ ಏರಿಕೆಯಾಗಿದೆ. ಸಕ್ರೀಯ ಸೋಂಕಿತರ ಸಂಖ್ಯೆ ಬೆಂಗಳೂರಿನಲ್ಲಿ 1.89 ಲಕ್ಷ ಸೇರಿದಂತೆ ರಾಜ್ಯದಲ್ಲಿ 3,28,711 ಜನರಿದ್ದಾರೆ ಎಂದು ತಿಳಿಸಿದ್ದಾರೆ.
ಇಂದು 67,236 ಸೋಂಕಿತರು ಗುಣಮುಖರಾಗಿದ್ದು, ಬೆಂಗಳೂರಿನ 12 ಮಂದಿ ಸೇರಿದಂತೆ 49 ಜನರು ಸಾವನ್ನಪ್ಪಿದ್ದಾರೆ ಎಂದು ಅವರು ತಿಳಿಸಿದ್ದಾರೆ.
COVID cases continue to dip in Karnataka:
◾New cases in State: 38,083
◾New cases in B'lore: 17,717
◾Positivity rate in State: 20.44%
◾Discharges: 67,236
◾Active cases State: 3,28,711 (B'lore- 189k)
◾Deaths:49 (B'lore- 12)
◾Tests: 1,86,313#COVID19 #Omicron— Dr Sudhakar K (@mla_sudhakar) January 27, 2022