ಶುಕ್ರವಾರ, 28 ಜನವರಿ 2022
ಮೇಷ
ಹದಗೆಟ್ಟ ಸಂಬಂಧವು ಇಂದು ಸುಧಾರಿಸುವುದು. ಹೊಸ ಕೆಲಸ ಆರಂಭಿಸುವ ಮುನ್ನ ಸರಿಯಾದ ಸಿದ್ಧತೆ ನಡೆಸಿಕೊಳ್ಳಿ.
ವೃಷಭ
ನಿಮ್ಮ ವೃತ್ತಿಯಲ್ಲಿ ಅಕಾರಕ್ಕೆ ಪೈಪೋಟಿ ಏರ್ಪಡಬಹುದು. ನಿಮ್ಮನ್ನು ದಮನಿಸಲು ಕೆಲವರಿಂದ ಯತ್ನ. ತಪ್ಪು ಎಸಗದಂತೆ ಎಚ್ಚರ ವಹಿಸಿರಿ.
ಮಿಥುನ
ಸಂಗಾತಿ ಜತೆಗೆ ವಿರಸ ಉಂಟಾದೀತು. ನಿಮ್ಮ ನಿಲುವಿಗೆ ಅಂಟಿಕೊಳ್ಳಬೇಡಿ. ಕೌಟುಂಬಿಕ ಶಾಂತಿ ಕಾಯ್ದುಕೊಳ್ಳಲು ಆದ್ಯತೆ ಕೊಡಬೇಕು.
ಕಟಕ
ಆತ್ಮೀಯರೊಂದಿಗೆ ಒಡನಾಟ. ಪ್ರೀತಿ, ಪ್ರಣಯದ ಭಾವ ಕಾಡಬಹುದು. ಅವಿವಾಹಿತರಿಗೆ ಶುಭ ಸುದ್ದಿ. ಉದ್ಯಮದಲ್ಲಿ ಯಶಸ್ಸು.
ಸಿಂಹ
ಆಪ್ತರ ಜತೆ ವ್ಯವಹರಿಸುವಾಗ ನಿಮ್ಮ ಅಹಂ ತ್ಯಜಿಸಬೇಕು. ಹೆಚ್ಚು ಹಣ ಸಂಪಾದಿಸುವ ಯೋಜನೆ ಫಲಿಸುವುದಿಲ್ಲ.
ಕನ್ಯಾ
ಎಂದಿಗಿಂತ ಹೆಚ್ಚು ಹೊಣೆಗಾರಿಕೆ. ಕೆಲಸ ಆರಂಭಿಸುವ ಮುನ್ನ ಸರಿಯಾದ ಪೂರ್ವಸಿದ್ಧತೆ ಮಾಡಿಕೊಳ್ಳಿ. ಇಲ್ಲವಾದರೆ ಗೊಂದಲ.
ತುಲಾ
ನಿಮ್ಮ ಕಠಿಣ ದುಡಿಮೆ ಯನ್ನು ಸಂಬಂಸಿದವರು ಗಮನಿಸುತ್ತಿಲ್ಲ ಎಂಬ ಕೊರಗು. ಸಿಗಬೇಕಾದ ಮನ್ನಣೆ ಸಿಗುವುದಿಲ್ಲ. ಆರ್ಥಿಕ ಒತ್ತಡ ಹೆಚ್ಚು.
ವೃಶ್ಚಿಕ
ನಿಮ್ಮ ಗುರಿ ಸಾಸಬೇಕಾದರೆ ಯುಕ್ತಿಯಿಂದಲೂ ನಡಕೊಳ್ಳಬೇಕು. ಅನಿರೀಕ್ಷಿತವಾಗಿ ನಿಮ್ಮ ಪರಮಾಪ್ತರನ್ನು ಭೇಟಿಯಾಗುವಿರಿ.
ಧನು
ಕೆಲಸದ ಒತ್ತಡ. ಹಾಗಾಗಿ ಕುಟುಂಬದ ಕಡೆ ಗಮನ ಹರಿ ಸಲು ಸಮಯ ಸಾಲು ವುದಿಲ್ಲ. ಬಂಧುಗಳ ಭೇಟಿಯು ಮನಸ್ಸಿಗೆ ಶಾಂತಿ ತರುವುದು.
ಮಕರ
ಸವಾಲಿನ ದಿನ. ಮನೆಯಲ್ಲೂ, ಕೆಲಸದಲ್ಲೂ ದೊಡ್ಡ ಗುರಿ ಸಾಸಬೇಕಾಗುವುದು. ಇತರರ ಸಹಕಾರ ಲಭಿಸುವುದಿಲ್ಲ.
ಕುಂಭ
ಇಂದು ಸಂತೋಷ, ಉಲ್ಲಾಸದ ದಿನ. ಕೌಟುಂಬಿಕ ಪ್ರವಾಸದ ಅವಕಾಶ. ವೃತ್ತಿಯಲ್ಲಿ ನಿಮ್ಮ ಶ್ರಮಕ್ಕೆ ಉತ್ತಮ ಫಲ ದೊರಕುವುದು. ಧನಲಾಭ ನಿರೀಕ್ಷೆ.
ಮೀನ
ವೃತ್ತಿಗೆ ಸಂಬಂಸಿ ಉತ್ತಮ ಪ್ರಗತಿ. ಹೊಸ ಯೋಜನೆಗೆ ನೀವೇ ಮುಂಚೂಣಿ. ಸಂಗಾತಿಯಿಂದ ಅಚ್ಚರಿಯ ಸುದ್ದಿ ಕೇಳುವಿರಿ.