ಹೊಸದಿಗಂತ ಡಿಜಿಟಲ್ ಡೆಸ್ಕ್:
ಐಸಿಸಿ ಅಂಡರ್-19 ವಿಶ್ವಕಪ್ ನಲ್ಲಿ ಭರ್ಜರಿ ಪ್ರದರ್ಶನ ಕೊಟ್ಟ ದಕ್ಷಿಣ ಆಫ್ರಿಕಾದ ಬೇಬಿ ಎಬಿ ಡೆ ವಿಲಿಯರ್ಸ್ ಅಂದ್ರೆ ಡೆವಾಲ್ಡ್ ಬ್ರೇವಿಸ್ ಈಗ ಐಪಿಎಲ್ ಗೆ ಪದಾರ್ಪಣೆ ಮಾಡಲಿದ್ದಾರಂತೆ.
ಅಂಡರ್-19 ವಿಶ್ವಕಪ್ ನಲ್ಲಿ ತಮ್ಮ ಸ್ಫೋಟಕ ಬ್ಯಾಟಿಂಗ್ ಮೂಲಕ ಜಾಗತಿಕ ಮನ್ನಣೆ ಗಳಸಿದ್ದಾರೆ. ಅಷ್ಟೇ ಅಲ್ಲ ಅವರು ಎಬಿಡಿಯಂತೆ ಸಿಡಿಸಿದ ಸಿಕ್ಸರ್ ಹಾಗೂ ಬೌಂಡರಿಗಳಿಗೆ ಕ್ರಿಕೆಟ್ ಅಭಿಮಾನಿಗಳು ಫಿದಾ ಆಗಿ ಜ್ಯೂನಿಯರ್ ಎಬಿಡಿ ಎಂದಿದ್ದಾರೆ.
ಈಗ ಡೆವಾಲ್ಡ್ ಬ್ರೇವಿಸ್ ಅವರು ಆರ್ ಸಿಬಿಯ ಜರ್ಸಿ ಧರಿಸಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಇನ್ನು ಅವರಿಗೆ ಐಪಿಎಲ್ ಮೇಲಿನ ಪ್ರೀತಿ ಕುರಿತು ಹಂಚಿಕೊಂಡಿರುವ ವಿಡಿಯೋ ಕೂಡ ಎಲ್ಲೆಡೆ ಹರಿದಾಡುತ್ತಿದೆ.
ಸದ್ಯ ಎಲ್ಲಾ ಫ್ರ್ಯಾಂಚೈಸಿಗಳ ಕಣ್ಣು ಬೇಬಿ ಎಬಿಡಿ ಮೇಲೆ ಇದ್ದು, ಐಪಿಎಲ್ ಕಣಕ್ಕೆ ಇಳಿಯಲಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ. ಐಪಿಎಲ್ ನ ಯಾವ ತಂಡಕ್ಕೆ ಡೆವಾಲ್ಡ್ ಬ್ರೇವಿಸ್ ಆಯ್ಕೆಯಾಗುತ್ತಾರೆ ಎಂದು ಕಾದುನೋಡಬೇಕಿದೆ.