ಮಹಾರಾಷ್ಟ್ರದ ಆರು ಸುರಂಗ ಮಾರ್ಗಗಳ ಕಾಮಗಾರಿಗೆ ಚಾಲನೆ ನೀಡಿದ ಕೇಂದ್ರ ಸಚಿವ ನಿತಿನ್‌ ಗಡ್ಕರಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಮಹಾರಾಷ್ಟ್ರದ ಪುಣೆಯಿಂದ ಸುಮಾರು 80 ಕಿ.ಮೀ ದೂರದಲ್ಲಿರುವ ಸತಾರಾ ಜಿಲ್ಲೆಯ ಖಂಬಟ್ಕಿ ಘಾಟ್‌ ನಲ್ಲಿನ ಹೊಸ ಆರು ಸುರಂಗ ಮಾರ್ಗಗಳ ಕಾಮಗಾರಿಗೆ ಕೇಂದ್ರ ಸಚಿವ ನಿತಿನ್‌ ಗಡ್ಕರಿ ಚಾಲನೆ ನೀಡಿದರು.
ವಿಡಿಯೋ ಕಾನ್ಫರೆನ್ಸ್‌ ಮೂಲಕ ಈ ಯೋಜನೆಗೆ ಚಾಲನೆ ನೀಡಿದ ಅವರು, ಈ ನೂತನ ಆರ್‌ ಹೆಚ್ ಎಸ್‌ ಪೋರ್ಟಲ್‌ ಯೋಜನೆಯಿಂದ ರಾಷ್ಟ್ರೀಯ ಹೆದ್ದಾರಿ ಯೋಜನೆಗಳಿಗೆ ವೇಗ ಸಿಗಲಿದೆ. ಇದರಿಂದ ಬೆಂಗಳೂರು- ಮುಂಬೈ ಹೆದ್ದಾರಿ ಯೋಜನೆಗೂ ಮತ್ತಷ್ಟು ವೇಗ ಸಿಗಲಿದೆ ಎಂದರು.
ಈ ಸುರಂಗ ಮಾರ್ಗದಿಂದ ಸಮಯ ಹಾಗೂ ಹಣ ಎರಡೂ ಉಳಿತಾಯವಾಗಲಿದ್ದು, ಪುಣೆ ಹಾಗೂ ಸತಾರ ನಡುವಿನ ಮಾರ್ಗದ ಸಮಯ ಕಡಿತಗೊಳಿಸುತ್ತದೆ. ಜತೆಗೆ ಸೋಲಾಪುರ ಮಾರ್ಗದಲ್ಲಿನ ಸಂಚಾರ ದಟ್ಟಣೆ ಕಡಿಮೆಯಾಗುತ್ತದೆ ಎಂದು ತಿಳಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!