ಐಪಿಎಲ್‌ ಕಣಕ್ಕಿಳಿಯಲಿದ್ದಾರಾ ʼಬೇಬಿ ಎಬಿಡಿʼ? ಯಾರಿವರು ಗೊತ್ತಾ?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಐಸಿಸಿ ಅಂಡರ್‌-19 ವಿಶ್ವಕಪ್‌ ನಲ್ಲಿ ಭರ್ಜರಿ ಪ್ರದರ್ಶನ ಕೊಟ್ಟ ದಕ್ಷಿಣ ಆಫ್ರಿಕಾದ ಬೇಬಿ ಎಬಿ ಡೆ ವಿಲಿಯರ್ಸ್‌ ಅಂದ್ರೆ ಡೆವಾಲ್ಡ್‌ ಬ್ರೇವಿಸ್ ಈಗ ಐಪಿಎಲ್‌ ಗೆ ಪದಾರ್ಪಣೆ ಮಾಡಲಿದ್ದಾರಂತೆ.
ಅಂಡರ್-19‌ ವಿಶ್ವಕಪ್‌ ನಲ್ಲಿ ತಮ್ಮ ಸ್ಫೋಟಕ ಬ್ಯಾಟಿಂಗ್‌ ಮೂಲಕ ಜಾಗತಿಕ ಮನ್ನಣೆ ಗಳಸಿದ್ದಾರೆ. ಅಷ್ಟೇ ಅಲ್ಲ ಅವರು ಎಬಿಡಿಯಂತೆ ಸಿಡಿಸಿದ ಸಿಕ್ಸರ್‌ ಹಾಗೂ ಬೌಂಡರಿಗಳಿಗೆ ಕ್ರಿಕೆಟ್‌ ಅಭಿಮಾನಿಗಳು ಫಿದಾ ಆಗಿ ಜ್ಯೂನಿಯರ್‌ ಎಬಿಡಿ ಎಂದಿದ್ದಾರೆ.

Dewald Brevis with AB De Villiers. Photo- Twitterಈಗ ಡೆವಾಲ್ಡ್‌ ಬ್ರೇವಿಸ್‌ ಅವರು ಆರ್ ಸಿಬಿಯ ಜರ್ಸಿ ಧರಿಸಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ. ಇನ್ನು ಅವರಿಗೆ ಐಪಿಎಲ್‌ ಮೇಲಿನ ಪ್ರೀತಿ ಕುರಿತು ಹಂಚಿಕೊಂಡಿರುವ ವಿಡಿಯೋ ಕೂಡ ಎಲ್ಲೆಡೆ ಹರಿದಾಡುತ್ತಿದೆ.

Dewald Brevis in RCB jersey(Instagram/Dewald Brevis)ಸದ್ಯ ಎಲ್ಲಾ ಫ್ರ್ಯಾಂಚೈಸಿಗಳ ಕಣ್ಣು ಬೇಬಿ ಎಬಿಡಿ ಮೇಲೆ ಇದ್ದು, ಐಪಿಎಲ್‌ ಕಣಕ್ಕೆ ಇಳಿಯಲಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ. ಐಪಿಎಲ್‌ ನ ಯಾವ ತಂಡಕ್ಕೆ ಡೆವಾಲ್ಡ್‌ ಬ್ರೇವಿಸ್ ಆಯ್ಕೆಯಾಗುತ್ತಾರೆ ಎಂದು ಕಾದುನೋಡಬೇಕಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!