ಕೇಂದ್ರ ಬಜೆಟ್: ಹಸಿದವರ ಹೊಟ್ಟೆ ಮೇಲೆ ತಣ್ಣೀರು ಬಟ್ಟೆ ಹಾಕಿಕೊಂಡಂತೆ ಎಂದ ಹೆಚ್ ಡಿ ಕುಮಾರಸ್ವಾಮಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೇಂದ್ರ ಬಜೆಟ್ ಕುರಿತು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅಸಮಧಾನ ವ್ಯಕ್ತಪಡಿಸಿದ್ದು, ಈ ಬಜೆಟ್ ಹಸಿದವರ ಹೊಟ್ಟೆ ಮೇಲೆ ತಣ್ಣೀರು ಬಟ್ಟೆ ಹಾಕಿಕೊಂಡಂತೆ ಎಂದು ಹೇಳಿದ್ದಾರೆ.
ರಾಮನಗರದ ಚನ್ನಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ‌ ಅವರು, ಬಜೆಟ್​ನಲ್ಲಿ ಜಿಲ್ಲಾವಾರು ನೀರಾವರಿ ಯೋಜನೆಗಳನ್ನು ಜೋಡಿಸುವ ಬಗ್ಗೆ ಹೇಳಲಾಗಿದೆ.ಆದರೆ ಅವುಗಳು ಎಷ್ಟರ ಮಟ್ಟಿಗೆ ಕಾರ್ಯಾರಂಭಕ್ಕೆ ಬರುತ್ತದೆ ಅನ್ನೋದನ್ನು ನೋಡಬೇಕು ಎಂದರು.
ಟ್ಯಾಕ್ಸ್​ಗಳನ್ನು ಏರಿಕೆ ಮಾಡಿಲ್ಲ, ಅನ್ನೋದನ್ನು ಬಿಟ್ಟರೆ, ಆರ್ಥಿಕತೆ ಸುಧಾರಣೆ ಬಗ್ಗೆ ಯಾವ ಕ್ರಮಕೈಗೊಂಡಿಲ್ಲ. ಎಂದು ಕುಮಾರಸ್ವಾಮಿ ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!