ಒತ್ತಡ ಯಾರಿಗಿಲ್ಲ ಹೇಳಿ.. ಒತ್ತಡ ಆರೋಗ್ಯಕ್ಕೆ ಕುತ್ತಾಗದಂತೆ ತಡೆಯಲು ಹೀಗೆ ಮಾಡಿ..

ಬದುಕಿನಲ್ಲಿ ಒತ್ತಡ ಯಾರಿಗೆ ತಾನೇ ಇರೋದಿಲ್ಲ. ಸಣ್ಣ ಮಟ್ಟಿಗಿನ ಒತ್ತಡ ಎಲ್ಲರಿಗೂ ಇದ್ದದ್ದೇ. ಆದರೆ ಅದೇ ಕುತ್ತಿಗೆಗೆ ಬಂದರೆ ಆರೋಗ್ಯಕ್ಕೆ ತೊಂದರೆ ಖಂಡಿತ. ನಿಮ್ಮ ಕೆಲಸ ಅಥವಾ ಜೀವನ ಒತ್ತಡದಾಯಕವಾಗಿದೆ ಎಂದು ಅನಿಸಿದ ತಕ್ಷಣ ಜೀವನಶೈಲಿ ಬದಲಾಯಿಸಿ. ಒತ್ತಡದಿಂದ ಹೊರಬರಲು ಹೀಗೆ ಮಾಡಿ..

  • ದೈಹಿಕವಾಗಿ ಆಕ್ಟೀವ್ ಆಗಿರಿ, ಜಿಮ್, ವರ್ಕೌಟ್, ವಾಕ್, ಯೋಗ, ಆಟ, ಮನೆಕೆಲಸ ಹೀಗೆ..
  • ಆದಷ್ಟು ಒಳ್ಳೆಯ ಆಹಾರ ತಿನ್ನಿ, ಆಹಾರಕ್ಕೂ ಒತ್ತಡಕ್ಕೂ ಖಂಡಿತಾ ಸಂಬಂಧ ಇದೆ.
  • ಮೊಬೈಲ್, ಟಿವಿ ಹಾಗೂ ಕಂಪ್ಯೂಟರ್ ಬಳಕೆಯನ್ನು ಆದಷ್ಟು ಕಡಿಮೆ ಮಾಡಿ. ಇಡೀ ದಿನ ಸಿಸ್ಟಮ್ ಮುಂದೆ ಕೂತು ಕೆಲಸ ಮಾಡಿದ್ದರೆ ಮತ್ತೆ ಮೊಬೈಲ್ ನೋಡುತ್ತಾ ಕೂರಬೇಡಿ.
  • ನಿಮ್ಮನ್ನು ನೀವು ಪ್ರೀತಿಸಿ, ನಿಮ್ಮ ಬಗ್ಗೆ ನಿಮಗೆ ಕಾಳಜಿ ಇರಲಿ.
  • ಒಳ್ಳೆಯ ಪುಸ್ತಕ ಓದುವುದು, ಮಸಾಜ್, ಹಾಬಿ, ಒಳ್ಳೆಯ ಸ್ನಾನ, ಯೋಗ ಹೀಗೆ ಒಳ್ಳೆಯ ಅಭ್ಯಾಸ ನಿಮ್ಮದಾಗಲಿ.
  • ಆದಷ್ಟು ಕಾಫಿ ಕುಡಿಯುವುದನ್ನು ಕಡಿಮೆ ಮಾಡಿ.
  • ಸ್ನೇಹಿತರು, ಕುಟುಂಬದವರ ಜೊತೆ ಹೆಚ್ಚು ಸಮಯ ಕಳೆಯಿರಿ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!