ಹೊಸದಿಗಂತ ಡಿಜಿಟಲ್ ಡೆಸ್ಕ್:
ಅರುಣಾಚಲ ಪ್ರದೇಶದ 17 ವರ್ಷದ ಬಾಲಕ ಮಿರಾಮ್ ಟ್ಯಾರೋನ್ನನ್ನು ಚೀನಾ ಪೀಪಲ್ಸ್ ಲಿಬರೇಶನ್ ಆರ್ಮಿ ಅಪಹರಣ ಮಾಡಿ, ನಂತರ ಭಾರತಕ್ಕೆ ವಾಪಾಸು ಕಳಿಸಿತ್ತು. ಇದೀಗ ಚೀನಾ ಸೇನೆ ತನ್ನನ್ನು ಕಟ್ಟಿಹಾಕಿತ್ತು, ವಿದ್ಯುತ್ ಶಾಕ್ ನೀಡಿತ್ತು ಎಂದು ಮಿರಾಮ್ ಹೇಳಿರುವುದಾಗಿ ಅರುಣಾಚಲ ಪ್ರದೇಶ ಬಿಜೆಪಿ ಸಂಸದ ತಪೀರ್ ಗಾವೋ ಹೇಳಿದ್ದಾರೆ.
ಮೊದಲ ದಿನ ನನಗೆ ಹಿಂಸೆ ನೀಡಿದ್ದರು. ಕೈ ಕಟ್ಟಿ ದಟ್ಟವಾದ ಅರಣ್ಯದೊಳಗೆ ಕರೆದೊಯ್ದರು. ನಾನು ನನ್ನ ಸ್ನೇಹಿತ ಬೇಟೆಯಾಡುತ್ತಾ ಹೋದಾಗ ನನ್ನನ್ನು ಪಿಎಲ್ಎ ಸೈನಿಕರು ಬಂಧಿಸಿದರು. ಮೊದಲಿಗೆ ಅವರು ಯಾರು ಎನ್ನುವುದೇ ನನಗೆ ತಿಳಿಯಲಿಲ್ಲ. ಕತ್ತಲಲ್ಲಿ ಕೈ ಕಟ್ಟಿ ತಲೆಗೆ ಬಟ್ಟೆ ಹಾಕಿ ಆರ್ಮಿ ಕ್ಯಾಂಪ್ಗೆ ಕರೆದೊಯ್ದರು. ಅಲ್ಲಿ ವಿದ್ಯುತ್ ಶಾಕ್ ನೀಡಿದರು ಎಂದು ಮಿರಾಮ್ ಹೇಳಿರುವುದಾಗಿ ತಪೀರ್ ಹೇಳಿದ್ದಾರೆ.
ಕಾನೂನು ಬಾಹಿರವಾಗಿ ಚೀನಾದ ಭೂಪ್ರದೇಶ ಪ್ರವೇಶಿಸಿದ್ದಾನೆ ಎಂದು ಆರೋಪಿಸಿ ಚೀನಾ ಸೇನೆ ಮಿರಾಮ್ನನ್ನು ಅಪಹರಿಸಿತ್ತು. ಬಳಿಕ ಭಾರತೀಯ ಸೇನೆ ಆತನನ್ನು ಬಿಡುವಂತೆ ಹೇಳಿತ್ತು. ಇದಾದ 27 ದಿನಗಳ ನಂತರ ಮಿರಾಮ್ನನ್ನು ಚೀನಾ ಸೇನೆ ಭಾರತಕ್ಕೆ ಹಸ್ತಾಂತರಿಸಿತ್ತು.
I've received news that Miram Taron (who was handed over to India by PLA on Jan 27 days after he went missing) was beaten up&given electric shocks by PLA. This is a serious matter. I urge Govt to raise this issue with authorities concerned:Tapir Gao, BJP MP from Arunachal Pradesh pic.twitter.com/ep1SMRAdRh
— ANI (@ANI) February 2, 2022