ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತದ ಅಂಡರ್-19 ಕ್ರಿಕೆಟ್ ತಂಡ ವಿಶ್ವಕಪ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು ಸೋಲಿಸಿ ಭರ್ಜರಿ ಜಯಗಳಿಸಿದೆ.
ಮೊದಲಿಗೆ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಇಂಗ್ಲೆಂಡ್ ತಂಡ ಭಾರತೀಯ ಬೌಲರ್ ಗಳ ದಾಳಿಗೆ ತತ್ತರಿಸಿದರು. ಇದರಿಂದ 44.5 ಓವರ್ ಗಳಲ್ಲಿ ಇಂಗ್ಲೆಂಡ್ ಕೇವಲ 189 ರನ್ ಗಳನ್ನು ಮಾತ್ರ ಗಳಿಸಿತು.
ಇಂಗ್ಲೆಂಡ್ ನ ಜೇಮ್ಸ್ ರೆವ್ (95) ಹಾಗೂ ಸೇಲ್ಸ್ (93) ರನ್ ಗಳ ಜೊತೆಯಾಟವಾಡಿದರು.
ಒಟ್ಟು ಐಸಿಸಿ ಅಂಡರ್-19 ವಿಶ್ವಕಪ್ ನಲ್ಲಿ ಇಂಗ್ಲೆಂಡ್ ವಿರುದ್ದ 4 ವಿಕೆಟ್ ಗಳ ಗೆಲುವು ಸಾಧಿಸುವ ಮೂಲಕ ಭಾರತ ಐದನೇ ಬಾರಿಗೆ ಅಂಡರ್-19 ವಿಶ್ವ ಚಾಂಪಿಯನ್ ಆಗಿದೆ.
ಇಂಗ್ಲೆಂಡ್ ನೀಡಿದ 190 ರನ್‌ಗಳ ಬೆನ್ನತ್ತಿದ ಟೀಂ ಇಂಡಿಯಾಗೆ ಆರಂಭಿಕ ಹೊಡೆತ ಬಿದ್ದಿತು. ಬಳಿಕ ಹರ್ನೂರ್ ಸಿಂಗ್ (21), ಶೇಖ್ ರಶೀದ್ (50) ಯಶ್ ಧುಲ್ (17), ರಾಜ್ ಬವಾ (35), ಕೌಶಲ್ ತಾಂಬೆ (1), ನಿಶಾಂತಂ ಸಿಂಧು (50) ದಿನೇಶ್ ಬನ (13) ರನ್ ಗಳಿಸಿದರು.
ಅಂತಿಮವಾಗಿ ಭಾರತ ಅಂಡರ್ -19 ವಿಶ್ವಕಪ್ ಪಂದ್ಯದಲ್ಲಿ ಭಾರತ 47.4 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 195 ರನ್ ಗಳಿಸುವ ಮೂಲಕ 4 ವಿಕೆಟ್‍ಗಳ ಭರ್ಜರಿ ಜಯ ಸಾಧಿಸಿದೆ.