ದಿನಭವಿಷ್ಯ: ಈ ರಾಶಿಯವರು ಇತರರ ಸ್ವಭಾವ ಅರಿತು ಸ್ನೇಹ ಬೆಳೆಸುವುದು ಒಳಿತು..

ದಿನಭವಿಷ್ಯ

ಮೇಷ
ಅನಿರೀಕ್ಷಿತ ಕಾರ್ಯಗಳು ನಿಮ್ಮಿಂದಾಗ ಬಹುದು. ಕೆಲವರಿಗೆ ಇದು ಅಚ್ಚರಿ ಮೂಡಿಸ ಬಹುದು. ಹಳೆಯ ತಪ್ಪು ತಿದ್ದಿ ಕೊಳ್ಳುವ ಅವಕಾಶ. ಇದನ್ನು ಬಳಸಿಕೊಳ್ಳಿ.

ವೃಷಭ
ಕೆರಿಯರ್‌ನಲ್ಲಿ ಅಭಿವೃದ್ಧಿ ಸಾಸುವಿರಿ. ಹೊಸ ಅವಕಾಶ ಸಿಗಲಿದೆ. ಮಿತ್ರರೊಂದಿಗೆ ವಾಗ್ವಾದ ನಡೆದೀತು. ಸಹನೆಯಿಂದ ವರ್ತಿಸುವುದು ಹಿತಕರ.

ಮಿಥುನ
ಉತ್ಸಾಹದ ದಿನ. ಆಪ್ತರೊಂದಿಗೆ ಆತ್ಮೀಯವಾಗಿ ಕಾಲ ಕಳೆಯುವ ಅವಕಾಶ ಒದಗುವುದು. ಮೋಜು ಅತಿರೇಕಕ್ಕೆ ಹೋಗದಂತೆ ನೋಡಿಕೊಳ್ಳಿ.

ಕಟಕ
ಆರ್ಥಿಕವಾಗಿ ಉತ್ತಮ ದಿನ. ಖರ್ಚು ಕಡಿಮೆ, ಆದಾಯ ಹೆಚ್ಚು. ಮನೆಯಲ್ಲಿ ಸಂತೋಷ ಸಮಾರಂಭಕ್ಕೆ ಅವಕಾಶ ಒದಗಬಹುದು. ಬಂಧು ಮಿತ್ರರ ಬೇಟಿ.

ಸಿಂಹ
ಇತರರ ಸ್ವಭಾವವನ್ನು ಅರಿತು ಆಮೇಲೆ ಅವರೊಂದಿಗೆ ಸ್ನೇಹ ಬೆಳೆಸಿ. ಹಳೆಯ ಹೂಡಿಕೆಯ ಲಾಭ ಇಂದು ದೊರಕಬಹುದು.

ಕನ್ಯಾ
ವೃತ್ತಿಯಲ್ಲಿ ಮತ್ತು ಮನೆಯಲ್ಲಿ ಕೆಲವು ಸವಾಲುಗಳನ್ನು ಎದುರಿಸುವಿರಿ. ತಾಳ್ಮೆಯಿಂದ ವ್ಯವಹರಿಸಬೇಕು. ಆರೋಗ್ಯ ಸಮಸ್ಯೆ.

ತುಲಾ
ಪ್ರೀತಿಯ ಆಕರ್ಷಣೆಗೆ ಒಳಗಾಗುವ ಸಾಧ್ಯತೆಯಿದೆ. ವೃತ್ತಿಯಲ್ಲಿ  ಕಿರುಕುಳ ಅನುಭವಿಸುವಿರಿ. ಕೌಟುಂಬಿಕ ಅಸಹಕಾರ, ಅಸಮಾಧಾನ.

ವೃಶ್ಚಿಕ
ನಿಮ್ಮ ವೈವಾಹಿಕ ಜೀವನಕ್ಕೆ ಸಂಬಂಸಿ ಪ್ರಮುಖ ನಿರ್ಧಾರ ತಾಳಬೇಕಾಗುತ್ತದೆ.  ಆತುರ ತೋರದಿರಿ. ಹಣಕಾಸು ಮುಗ್ಗಟ್ಟು ಕಾಡುತ್ತದೆ.

ಧನು
ಒತ್ತಡಗಳಿದ್ದರೂ ನಿಮ್ಮ ಕಾರ್ಯವನ್ನು ಸಮರ್ಥವಾಗಿ ನಿಭಾಯಿಸುವಿರಿ. ಅದು ಮೆಚ್ಚುಗೆ ಗಳಿಸುತ್ತದೆ. ಕೌಟುಂಬಿಕ ಸಂತೋಷ, ಸಾಮರಸ್ಯ.

ಮಕರ
ನಿಮ್ಮ ಸಾಮರ್ಥ್ಯದ ಮೇಲೆ ನಿಮಗೇ ಅಪನಂಬಿಕೆ. ಆದರೆ ಆತ್ಮವಿಶ್ವಾಸದಿಂದ ಮುನ್ನಡೆದರೆ ನಿಮಗೆ ಯಶಸ್ಸು ಖಂಡಿತ. ಆರೋಗ್ಯ ಸುಧಾರಣೆ.

ಕುಂಭ
ಖಾಸಗಿ ಬದುಕಲ್ಲಿ ಸಮಸ್ಯೆಗಳು. ಆದರೆ ನಿಮ್ಮ ಸಂವಹನ ಸಾಮರ್ಥ್ಯದಿಂದ ಅದನ್ನು ನಿಭಾಯಿಸುವಿರಿ. ಆರ್ಥಿಕ ಒತ್ತಡ.

ಮೀನ
ವೃತ್ತಿ ಕ್ಷೇತ್ರದಲ್ಲಿ  ಇತರರ ಮೇಲೆ ಮೇಲುಗೈ ಸಾಸುವಿರಿ. ನಿಮ್ಮ ನಿರ್ವಹಣೆ ಉತ್ತಮ ಫಲ ನೀಡಲಿದೆ. ಕೌಟುಂಬಿಕ ಶಾಂತಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!