ಹೊಸದಿಗಂತ ವರದಿ, ಕಲಬುರಗಿ:
ನಾನು ಯಾವುದೇ ರೀತಿಯ ತಪ್ಪು ಮಾಡಿಲ್ಲ, ಸರ್ಕಾರ ಯಾವ ರೀತಿಯಲ್ಲಾದರೂ ತನಿಖೆ ನಡೆಸಲಿ ಹಾಗೂ ತಪ್ಪಿಸ್ಥರು ಯಾರೇ ಇದ್ದರೂ ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳಲಿ ಎಂದು ಎಂದು ಸೇಡಂ ಶಾಸಕ ರಾಜಕುಮಾರ್ ಪಾಟೀಲ್ ಹೇಳಿದ್ದಾರೆ.
ಕಲಬುರಗಿ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ನನ್ನಿಂದ ಯಾರ ಮಾನಕ್ಕೂ ಧಕ್ಕೆ ತರುವ, ಪಕ್ಷಕ್ಕೆ ಹಾಗೂ ಕಾರ್ಯಕರ್ತರಿಗೆ ಮುಜುಗರ ತರುವ ಕೆಲಸ ನಡೆದಿಲ್ಲ. ಕಾನೂನುಬದ್ಧ ಹೋರಾಟಕ್ಕೆ ಸಿದ್ಧವಾಗಿದ್ದೇನೆ ಎಂದರು.
ಏನಿದು ಮಹಿಳೆ ಆರೋಪ?: ಶಾಸಕ ರಾಜಕುಮಾರ್ ಪಾಟೀಲ್ ತೆಲ್ಕೂರ ವಿರುದ್ದ ಮಹಿಳೆಯೊಬ್ಬರು ದೌರ್ಜನ್ಯದ ಆರೋಪ ಮಾಡಿದ್ದಾರೆ. ಕಳೆದ 14 ವರ್ಷದಿಂದ ತನ್ನ ಮೇಲೆ ಶಾಸಕನ ದೌರ್ಜನ್ಯ ನಡೆಯುತ್ತಿದ್ದು, ನನ್ನ ಮಗನಿಗೆ ನ್ಯಾಯಬೇಕು ಎಂದು ಮಹಿಳೆ ಹೇಳಿಕೊಂಡಿದ್ದಾರೆ. ವಕೀಲ ಜಗದೀಶ್ ಅವರಿಗೆ ವಿಡಿಯೋ ಕಾಲ್ ಮೂಲಕ ಮಹಿಳೆ ತನ್ನ ಮೇಲೆ ನಡೆದಿರುವ ದೌರ್ಜನ್ಯ ಹೇಳಿಕೊಂಡಿದ್ದಾಳೆ.