ಹೊಸದಿಗಂತ ಡಿಜಿಟಲ್ ಡೆಸ್ಕ್:
ಹಿರಿಯ ಗಾಯಕಿ ಲತಾ ಮಂಗೇಶ್ಕರ್ ಇಹಲೋಕ ತ್ಯಜಿಸಿದ್ದಾರೆ.
ಇಡೀ ದೇಶವೇ ದುಃಖದಲ್ಲಿದ್ದು, ಗಾಯಕಿ ಶ್ರೇಯಾ ಘೋಷಾಲ್ ಕೂಡ ಭಾವನಾತ್ಮಕ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ.
ದಿನದಿಂದ ನನ್ನ ಕಣ್ಣೀರು ನಿಲ್ಲುತ್ತಲೇ ಇಲ್ಲ. ನಿಮ್ಮ ಹಾಡುಗಳನ್ನು ಕೇಳಿದಷ್ಟು ದುಃಖವಾಗುತ್ತಿದೆ. ನಿಮ್ಮ ಧ್ವನಿ ನನಗೆ ತುಂಬಾ ಆತ್ಮೀಯ ಲತಾ ಜಿ.
ನನ್ನ ಬಾಲ್ಯದಲ್ಲಿ, ಖುಷಿಯಾದಾಗ, ದುಃಖ ಆದಾಗ, ಸಿಟ್ಟು ಬಂದಾಗ, ಗೆದ್ದಾಗ, ಸೋತಾಗ ನಿಮ್ಮ ಹಾಡುಗಳನ್ನು ಕೇಳುತ್ತಿದ್ದೆ. ನಿಮ್ಮ ಹಾಡುಗಳನ್ನು ಕಲಿಯಲು ನಾನು ಪಟ್ಟ ಪ್ರಯತ್ನಗಳು ಅಷ್ಟಿಷ್ಟಲ್ಲ. ನಿಮ್ಮ ಹಾಡಿನಿಂದಲೇ ನಾನು ಮೊದಲ ಕಾಂಪಿಟೇಶನ್ ಗೆದ್ದಿದ್ದು, ನಿಮ್ಮ ಹಾಡಿನಿಂದಲೇ ನಾನು ಮೊದಲು ಆಡಿಶನ್ ನೀಡಿದ್ದು, ನಿಮ್ಮ ಹಾಡಿನಿಂದಲೇ ನಾನು ಬಾಲಿವುಡ್‌ಗೆ ಎಂಟ್ರಿ ನೀಡಿದ್ದು. ನಿಮ್ಮ ಅಗಲಿಕೆಯ ನೋವು ವೈಯಕ್ತಿಕ ಆಗಿಬಿಟ್ಟಿದೆ. ನೀವು ಎಂದಿಗೂ ನನ್ನ ಗುರು. ನನ್ನನ್ನು ಪ್ರೀತಿಯಿಂದ ಸಾಕಷ್ಟು ಬಾರಿ ಆಶೀರ್ವದಿಸಿದ್ದೀರಿ. ನಿಮ್ಮ ಆಶೀರ್ವಾದ ಸದಾ ನನ್ನ ಮೇಲೆ ಇರಲಿ. ನಿಮ್ಮನ್ನು ಕಳೆದುಕೊಂಡ ದುಃಖ ನನ್ನ ಮನಸ್ಸಿನ ಆಳದಲ್ಲಿ ಬೇರೂರಿದೆ, ನನ್ನ ಜೀವನದ ಒಂದು ಅಂಶ ನಿಮ್ಮ ಜೊತೆ ತೆರಳಿದೆ ಎಂದಿದ್ದಾರೆ.