Wednesday, August 17, 2022

Latest Posts

ಕಾಂಗ್ರೆಸ್ಸಿನ ಪಂಜಾಬ್ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಚನ್ನಿ, ಈಗ ನವಜೋತ್ ಸಿದ್ದು ಫುಲ್ ಟ್ರೋಲ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಚರಣ್ ಸಿಂಗ್ ಚನ್ನಿ ಅವರು ಕಾಂಗ್ರೆಸ್‌ನ ಮುಂದಿನ ಸಿಎಂ ಅಭ್ಯರ್ಥಿ ಎಂದು ರಾಹುಲ್ ಗಾಂಧಿ ಘೋಷಿಸಿದ್ದಾರೆ. ನವಜೋತ್ ಸಿಂಗ್ ಸಿಧು ಮತ್ತು ಚರಣ್ ಜೀತ್ ಸಿಂಗ್ ಚನ್ನಿ ಜೊತೆ ಪ್ರಚಾರದಲ್ಲಿ ಭಾಗವಹಿಸಿ ಈ ನಿರ್ಧಾರ ಘೋಷಣೆ ಮಾಡಿದ್ದಾರೆ. ಸಿಎಂ ರೇಸ್‌ನಲ್ಲಿ ಇದ್ದ ನವಜೋತ್ ಸಿಂಗ್ ಸಿಧುಗೆ ಭಾರೀ ನಿರಾಸೆಯಾಗಿದ್ದು, ಇದೀಗ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿದ್ದಾರೆ.

ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಮಾಡುವವರು ಪಂಜಾಬಿನ ಜನರೇ ಹೊರತು ಯಾವ ಹೈಕಮಾಂಡೂ ಅಲ್ಲ ಎಂದಿದ್ದರು ಸಿಧು. ಆದರೆ ಹೈಕಮಾಂಡಿನಿಂದ ಬಂದ ರಾಹುಲ್ ಗಾಂಧಿ ಇವರಿದ್ದ ವೇದಿಕೆಯಲ್ಲೇ ಚನ್ನಿಯವರನ್ನು ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಮಾಡಿದ್ದು ಸಾಮಾಜಿಕ ಮಾಧ್ಯಮದಲ್ಲಿ ಗೇಲಿಯ ವಸ್ತುವಾಗಿದೆ.

ಸಾಮಾಜಿಕ ಜಾಲತಾಣದಲ್ಲಿ ಸಿಧು ಭಾರೀ ಟ್ರೋಲ್ ಆಗುತ್ತಿದ್ದು, ವಿಡಿಯೋವೊಂದು ವೈರಲ್ ಆಗಿದೆ. ತನ್ನನ್ನು ಸಿಎಂ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಬಹುದು ಎಂದು ಆತ್ಮವಿಶ್ವಾಸದಲ್ಲಿ ಮಾತನಾಡಿದ ಸಿಧುಗೆ ಕೆಲವೇ ನಿಮಿಷದಲ್ಲಿ ಶಾಕ್ ಆಗಿದೆ. ಮುಖ್ಯಮಂತ್ರಿ ಅಭ್ಯರ್ಥಿ ಚರಣ್ ಜೀತ್ ಸಿಂಗ್ ಎಂದು ರಾಹುಲ್ ಗಾಂಧಿ ಘೋಷಿಸಿದ ನಂತರ ಮನಸ್ಸಲ್ಲಿ ನಿರಾಸೆ ಇದ್ರೂ ಖುಷಿಯಾಗಿರುವಂತೆ ಸಿಧು ತೋರಿಸಿಕೊಂಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!